ನವದೆಹಲಿ : ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಮಂಗಳವಾರ ’ಮಿಷನ್ 41ಕೆ’ ಯೋಜನೆಯನ್ನು ಅನಾವರಣಗೊಳಿಸಿದರು. ಈ ಯೋಜನೆಯು ಭಾರತೀಯ ರೈಲ್ವೆ ಮುಂದಿನ ಹತ್ತು ವರ್ಷಗಳಲ್ಲಿ ಬಳಸಲಾಗುವ ಶಕ್ತಿಯ ಮೇಲೆ ರೂ 41,000 ಕೋಟಿ ಉಳಿತಾಯ ಮಾಡಬಹುದು ಎಂದಿದ್ದಾರೆ.
ಈಗ ಓಡಾಡುತ್ತಿರುವ ರೈಲ್ವೆಗಳ ಶೇಕಡಾ 90ರಷ್ಟು ಸಂಚಾರವನ್ನು ವಿದ್ಯುತ್ ರೈಲ್ವೆಗಳಿಗೆ ಬದಲಾಯಿಸುವ ಮೂಲಕ ಈ ಗುರಿಯನ್ನು ಸಾಧಿಸಬಹುದಾಗಿದೆ.
ಪ್ರಸ್ತುತ ಇದು ಒಟ್ಟು ರೈಲ್ವೆ ಸಂಚಾರದ ಶೇಕಡಾ 50 ರಷ್ಟು ಆಗಿದೆ. ರೈಲ್ವೆ ವಿದ್ಯುದೀಕರಣದ ಪ್ರಕ್ರಿಯೆಯ ವೇಗವನ್ನು ದ್ವಿಗುಣಗೊಳಿಸುವ ಮೂಲಕ ಈ ಗುರಿಯನ್ನು ಸಾಧಿಸುವುದಾಗಿ ಸಚಿವಾಲಯ ಯೋಜಿಸಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಎ.ಕೆ ಮಿತ್ತಲ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ರೈಲ್ವೆಗಳು ಡಿಐಎಸ್ಸಿಒಎಮ್ ಮತ್ತು ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸುವ ಬದಲು ಮುಕ್ತ ಮಾರುಕಟ್ಟೆಯ ಮೂಲಕ ಕಡಿಮೆ ಬೆಲೆಯಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಸಂಗ್ರಹಿಸುವ ಗುರಿಯನ್ನು ಹೊಂದಿವೆ. ಇದರಿಂದ ರೈಲ್ವೆಯ ಶಕ್ತಿ ಬಳಕೆಯಲ್ಲಿ ಶೇ. 25 ರಷ್ಟು ಉಳಿತಾಯ ಮಾಡಬಹುದು.
ವಿದ್ಯುತ್ ಬಳಕೆಯನ್ನು ಉಳಿಸಲು ಹೊಸ ತಂತ್ರಜ್ಞಾನಗಳನ್ನೂ ಅನ್ವೇಷಿಸಲಾಗುತ್ತಿದೆ. ಕೊನೆಯ ಬಜೆಟ್ನಲ್ಲಿ ರೈಲ್ವೆಗಳು 1000 ಮೆಗಾವ್ಯಾಟ್ ಸೌರಶಕ್ತಿ ಮತ್ತು 200 ಮೆಗಾವ್ಯಾಟ್ ಗಾಳಿಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿವೆ.
2014-15 ರ ಅವಧಿಯಲ್ಲಿ ಭಾರತೀಯ ರೈಲ್ವೆ ಸುಮಾರು 18.25 ಬಿಲಿಯನ್ ಯುನಿಟ್ಸ್ ವಿದ್ಯುತ್ನ್ನು ಬಳಸಿಕೊಂಡಿದೆ ಹಾಗೂ ರೂ.12,635 ಕೋಟಿ ಹಣವನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.