ನವದೆಹಲಿ: ಭಾರತ ಈಗಲೂ ಕ್ಷಿಪ್ರ ಆರ್ಥಿಕ ಬೆಳವಣಿಗೆ ಹೊಂದಿದ ರಾಷ್ಟ್ರ. 2017ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ 7.7ರಷ್ಟು ಬೆಳೆಯಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಭಾರತದಲ್ಲಿ ಖಾಸಗಿ ಬೆಳವಣಿಗೆ ಮತ್ತು ದೇಶೀಯ ಸುಧಾರಣೆಗಳಿಂದ ಕ್ರಮೇಣವಾಗಿ 2017ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.7ರಷ್ಟು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ 2018ರ ಆರ್ಥಿಕ ವರ್ಷದಲ್ಲಿ ಶೇ.7.6ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಶೋಧನೆ (ಡಬ್ಲೂಇಎಸ್ಪಿ) 2017 ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ಬಿಧಿ ಸಂಸ್ಥೆ (ಐಎಂಎಫ್) ಮಂಗಳವಾರ ವಿಶ್ವ ಆರ್ಥಿಕ ಮುನ್ನೋಟ/ಅಂದಾಜು ವರದಿ ಮಂಡಿಸಿ ಭಾರತದ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ದರವನ್ನು ಈ ಹಿಂದಿನ ಶೇ.7.6ರಿಂದ ಶೇ.6.6ಕ್ಕೆ ಕಡಿತಗೊಳಿಸಿದೆ. ಭಾರತದ ಆರ್ಥಿಕತೆ ತಾತಾಲಿಕವಾಗಿ ಕುಸಿದಿದ್ದು, 2018ರ ವೇಳೆಗೆ ಭಾರತದ ಆರ್ಥಿಕತೆ ಮತ್ತೆ ಶೇ.7.7ಕ್ಕೆ ಏರುವ ಬಗ್ಗೆ ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ.
ಮತ್ತೊಂದೆಡೆ ಚೀನಾದ ಆರ್ಥಿಕ ಬೆಳವಣಿಗೆ 2017-18ರ ಆರ್ಥಿಕ ವರ್ಷದಲ್ಲಿ ಸ್ಥಿರವಾಗಿರಲಿದ್ದು, ಶೇ. 6.5ರಷ್ಟು ಇರಲಿದೆ ಎಮದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.