ನವದೆಹಲಿ: ಭಾರತೀಯ ಸೇನೆಯ ಯೋಧರು ದಶಕಗಳ ಬಳಿಕ ಮೊದಲ ಬಾರಿ ಅತ್ಯಾಧುನಿಕ ಗುಂಡು ನಿರೋಧಕ ಹೆಲ್ಮೆಟ್ಗಳನ್ನು ಪಡೆಯಲಿದ್ದಾರೆ.
ಯೋಧರಿಗಾಗಿ ಅತ್ಯಾಧುನಿಕ ಹೆಲ್ಮೆಟ್ ತಯಾರಿಸಲು ಕಾನ್ಪುರ ಮೂಲದ ಎಂಕೆಯು ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಲಾಗಿದ್ದು, ರೂ. 170 ಹಾಗೂ 180 ಕೋಟಿ ರೂ. ವೆಚ್ಚದಲ್ಲಿ 1.58 ಲಕ್ಷ ಹೆಲ್ಮೆಟ್ಗಳನ್ನು ತಯಾರಿಸುವ ಕಾರ್ಯ ಆರಂಭಗೊಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತೀಯ ಸೇನೆಗೆ ಈ ಹೆಲ್ಮೆಟ್ಗಳನ್ನು ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಎಂಕೆಯು ಇಂಡಸ್ಟ್ರೀಸ್ ವಿಶ್ವದಾದ್ಯಂತ ಹಲವು ದೇಶಗಳಿಗೆ ರಕ್ಷಣಾ ಪರಿಕರಗಳು, ಬುಲೆಟ್ ಪ್ರೂಫ್ ಜಾಕೆಟ್, ಹೆಲ್ಮೆಟ್ಗಳನ್ನು ತಯಾರಿಸಿ ರಫ್ತು ಮಾಡುವ ಸಂಸ್ಥೆಯಾಗಿದೆ.
ಈ ನೂತನ ಹೆಲ್ಮೆಟ್ಗಳು ಅಲ್ಪ ಅಂತರದ ವ್ಯಾಪ್ತಿಯಲ್ಲಿ 9 ಎಂಎಂ ಮದ್ದುಗುಂಡುಗಳನ್ನು ತಗುಲದಂತೆ ತಡೆಯುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಹೆಲ್ಮೆಟ್ಗಳು ಆರಾಮದಾಯಕ ಮತ್ತು ಕೆಲವು ಸಂವಹನ ಸಾಧನಗಳನ್ನು ಸಂಯೋಜಿಸುವ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.
ದಶಕಗಳ ಹಿಂದೆ ಭಾರತೀಯ ಸೇನೆಯ ವಿಶೇಷ ಪಡೆಗಳು ಇಸ್ರೇಲ್ನಿಂದ ಆಮದು ಮಾಡಲಾದ ಓಆರ್-201 ಅಳವಡಿಸಲಾದ ಗ್ಲಾಸ್ನಿಂದ ಕೂಡ ಪ್ಲಾಸ್ಟಿಕ್ನಿಂದ ತಯಾರಿಸಿದ ಹೆಲ್ಮೆಟ್ಗಳನ್ನು ತಯಾರಿಸಲಾಗುತ್ತಿತ್ತು. ಅಲ್ಲದೇ ಸಾಮಾನ್ಯ ಸೈನಿಕರು ಯುದ್ಧದ ಸಂದರ್ಭದಲ್ಲಿ ಅತ್ಯಂತ ಭಾರದಿಂದ ಕೂಡಿದ ದೇಶೀಯವಾಗಿ ನಿರ್ಮಿಸಲಾದ ಹೆಲ್ಮೆಟ್ಗಳನ್ನು ಬಳಸುತ್ತಿದ್ದು, ಇವು ಶತ್ರುಗಳ ಗಂಡುಗಳನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.