ನವದೆಹಲಿ: ರೈಸಿನಾ ಮಾತುಕತೆ ಇಂದಿನ ಭೌಗೋಳಿಕ ರಾಜಕೀಯ ವಿಚಾರಗಳ ವಿವೇಚನೆಗೆ ಒಂದು ವೇದಿಕೆಯಾಗಿದೆ. ಈ ವರ್ಷ ನಡೆಯಲಿರುವ ಸಮ್ಮೇಳನದಲ್ಲಿ 69 ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ ತನ್ನ ರಾಜತಾಂತ್ರಿಕ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದ್ದು, ಭಾರತದ ವಿದೇಶಿ ನೀತಿಗಳ ಸೂತ್ರಗಳ ಒಳಹರಿವು ವಿಚಾರದಲ್ಲಿ ಜಾಗತಿಕ ನಾಯಕರು, ಚಿಂತಕರು ಮತ್ತು ತಂತ್ರಜ್ಞರ ಜೊತೆಗಿನ ಸಂಬಂಧಗಳು ನಿರ್ಣಾಯಕ ಅಂಶವಾಗಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಚಿಂತಕರ ವೇದಿಕೆ, ರೈಸಿನಾ ಡೈಲಾಗ್ ಮತ್ತು ಗೇಟ್ವೇ ಆಫ್ ಇಂಡಿಯಾ ಡೈಲಾಗ್ಗಳ ಮೂಲಕ ಪ್ರತ್ಯೇಕ ರಾಷ್ಟ್ರಗಳೊಂದಿಗೆ ಇಂತಹ ಅನೇಕ ವೇದಿಕೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಈ ಸಮ್ಮೇಳನ ಒಂದು ಪ್ರೋತ್ಸಾಹಕರ ಪ್ರತಿಕ್ರಿಯೆಯನ್ನು ಬಿಂಬಿಸಲಿದೆ ಎಂಬುದು ಸ್ಪಷ್ಟವಾಗಿದೆ. ಸಮ್ಮೇಳನದಲ್ಲಿ 69 ರಾಷ್ಟ್ರಗಳ 450 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ವರೂಪ್ ಹೇಳಿದ್ದಾರೆ.
ಈ ಬಾರಿಯ ಸಮ್ಮೇಳನದ ವಿಷಯ ‘ದ ನ್ಯೂ ನಾರ್ಮಲ್-ಮಲ್ಟಿಲ್ಯಾಟರ್ಯಾಲಿಸಂ ವಿಥ್ ಮಲ್ಟಿ-ಪೊಲಾರಿಟಿ’ ಎಂಬುದಾಗಿದೆ. ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಜಿ ನಾಯಕರು, ವಿದೇಶಾಂಗ ಸಚಿವರು ಹಾಗೂ ವಿವಿಧ ರಾಷ್ಟ್ರಗಳ ಸಚಿವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕಾರ್ಯಕ್ರಮದ ಪ್ರಮುಖ ಭಾಗವಾಗಿರಲಿದೆ ಎಂದು ಸ್ವರೂಪ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.