ಮುಂಬಯಿ: ಅನ್ಯ ಕೋಮಿನ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಮೂವರಿಗೆ ಕಳೆದ ವಾರ ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ.
2014 ರ ಜೂನ್ 2 ರಂದು 28 ವರ್ಷದ ಮೊಹ್ಸೀನ್ ಶೇಕ್ ಎಂಬುವನು ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಟಾಗ, ಅವನು ಹೊರಟ ಬೈಕನ್ನು ತಡೆದ ಒಂದು ಗುಂಪು ಹಾಕಿ ಸ್ಟಿಕ್, ಬ್ಯಾಟ್ ಹಾಗೂ ಕಲ್ಲುಗಳಿಂದ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು.
ಫೇಸ್ಬುಕ್ನ ವಾಲ್ನಲ್ಲಿ ಶಿವಾಜಿ ಹಾಗೂ ಶಿವಸೇನೆಯ ಬಾಳಾಸಾಹೇಬ ಠಾಕ್ರೆ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ಹಾಕಿದ್ದ ಕುರಿತು ಮೊಹ್ಸಿನ್ ವಿರುದ್ಧ ಆಕ್ರೋಶವಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 21 ಜನ ಬಂಧಿತರಾಗಿದ್ದು, ಅವರಲ್ಲಿ ಮೂವರಿಗೆ ಜಾಮೀನು ದೊರೆತಿದೆ.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶೆ ಮೃದುಲಾ ಭಟ್ಕರ್ ಅವರು ಆದೇಶದಲ್ಲಿ ತಿಳಿಸಿರುವಂತೆ, ಮೃತನು ಅನ್ಯಕೋಮಿಗೆ ಸೇರಿದವನು ಎಂಬುದು ಈ ಕೃತ್ಯಕ್ಕೆ ಮೂಲ ಕಾರಣ. ಇದನ್ನೇ ನಾನು ಆರೋಪಿಗಳ ಪರವಾಗಿ ಪರಿಗಣಿಸುವುದಾದರೆ, ಆರೋಪಿಯು ಇದಕ್ಕೂ ಪೂರ್ವದಲ್ಲಿ ಯಾವುದೇ ರೀತಿಯ ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಿಲ್ಲ. ಅವರ ಧರ್ಮದ ಅವಹೇಳನವೇ ಅವರಿಗೆ ಈ ಕೃತ್ಯ ಎಸಗಲು ಪ್ರಚೋದನೆ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಯು ಮೊಹ್ಸಿನ್ನ ವಿರುದ್ಧ ವೈಯಕ್ತಿಕವಾಗಿ ಯಾವುದೇ ವೈರತ್ವವನ್ನೂ ಹೊಂದಿರುವುದಿಲ್ಲ ಎಂಬುದನ್ನೂ ಪರಿಗಣಿಸಬೇಕಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ಮೊಹ್ಸಿನ್ ಕುಟುಂಬವು ಸುಪ್ರೀಂ ಕದ ತಟ್ಟುವುದಾಗಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.