ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ಕೈಗೊಂಡ ಅನಾಣ್ಯೀಕರಣ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಫ್ರಾನ್ಸ್, ಅನಾಣ್ಯೀಕರಣ ತೆರಿಗೆ, ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಮೋದಿ ಅವರ ‘ದಿಟ್ಟತನ’ವನ್ನು ತೋರಿಸುತ್ತದೆ ಎಂದು ಹೇಳಿದೆ.
ಇದೇ ವೇಳೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಪ್ರಧಾನಿ ಮೋದಿ ಅವರು ಕೈಗೊಂಡಿರುವ ಕೆಲವು ಸುಧಾರಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಫ್ರಾನ್ಸ್ನ ವಿದೇಶಾಂಗ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವ ಜೀನ್ ಮಾರ್ಕ್ ಅರಾಲ್ಟ್, ಇದು ಸರಿಯಾದ ಪಥದಲ್ಲಿ ಸಾಗುತ್ಯಿದೆ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ ಅರಾಲ್ಟ್ ಅವರು, ಭಾರತದ ಮೇಕ್ ಇನ್ ಇಂಡಿಯಾ ಕುರಿತು ಶ್ಲಾಘಿಸಿದ್ದು, ಫ್ರಾನ್ಸ್ ‘ಮೇಕ್ ಇನ್ ಇಂಡಿಯಾ’ದ ಪ್ರಮುಖ ಪಾಲುದಾರ ಆಗಲು ಬಯಸಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದಲ್ಲಿ ವ್ಯಾಪಾರ ಅಡೆತಡೆಗಳನ್ನು ಸುಧಾರಿಸಲು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ‘ಜಂಟಿ ಪ್ರಯತ್ನಗಳು’ ನಡೆಯಬೇಕು. ಆಮದು-ರಫ್ತು ಆಡಳಿತ ಸರಾಗಗೊಳಿಸಲು ಮತ್ತು ನಿಬಂಧನೆಗಳ ಸ್ಥಿರತೆಗೆ ಭಾರತ ಸುಧಾರಣೆಗಳನ್ನು ತರಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರದಿಂದ ಪ್ರಭಾವಿತನಾಗಿದ್ದು, ಇದು ಆಧುನಿಕ ಆರ್ಥಿಕತೆಯ ಗುರಿಯೊಂದಿಗೆ ಡಿಜಿಟಲ್ ಆರ್ಥಿಕತೆಯ ಪರೊವರ್ತನೆಯ ಕ್ರಮವಾಗಿದೆ ಎಂದು ಅರಾಲ್ಟ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.