ದಾವೋಸ್: ಸ್ವಿಡ್ಸರ್ಲೆಂಡ್ನ ವಿಹಾರಧಾಮದಲ್ಲಿ ಇಂದಿನಿಂದ ಜ.20 ರವರೆಗೆ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ನಡೆಯಲಿದ್ದು, ಭಾರತದ ನಿಯೋಗವೂ ಅದರಲ್ಲಿ ಪಾಲ್ಗೊಳ್ಳಲಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ನಿರ್ಮಲಾ ಸೀತಾರಾಮನ್, ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಸಚಿವಾಲಯದ ಕಾರ್ಯದರ್ಶಿ ರಮೇಶ ಅಭಿಷೇಕ್, ಟಾಟಾ ಸನ್ಸ್ನ ಎನ್ ಚಂದ್ರಶೇಖರನ್ ಹಾಗೂ ಚಂದ್ರಬಾಬು ನಾಯ್ಡು ಅವರು ಭಾರತದ ನಿಯೋಗದಲ್ಲಿದ್ದಾರೆ.
ಈ ಸಮಾವೇಶದಲ್ಲಿ ಉದ್ಯಮ ವಲಯದ ಮುಖ್ಯಸ್ಥರು, ಸರ್ಕಾರದ ಪ್ರಮುಖರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ’ಜಾಗತಿಕ ಆರ್ಥಿಕತೆ ಹಾಗೂ ಶೀಘ್ರವಾಗಿ ಸ್ಪಂದಿಸುವ ಮತ್ತು ಹೊಣೆಗಾರಿಕೆ ನಾಯಕತ್ವ’ ಕುರಿತು ಸಂವಾದ ನಡೆಯಲಿದೆ.
ನೋಟುಗಳ ರದ್ದತಿ, ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಜಾಗತೀಕರಣಕ್ಕೆ ಉಂಟಾಗಲಿರುವ ಪರಿಣಾಮ, ಆರ್ಥಿಕ ಅಸಮಾನತೆ, ಪರಿಸರ ಸಂಬಂಧಿ ವಿಷಯಗಳ ಕುರಿತು ಅಲ್ಲಿ ವಿಚಾರಗೋಷ್ಠಿ ನಡೆಯಲಿವೆ.
ಬ್ರಿಟನ್ ಪ್ರಧಾನಿ ತೆರೆಸಾ ಮೇ, ಪಾಕಿಸ್ಥಾನದ ಪ್ರಧಾನಿ ನವಾಜ್ ಷರೀಫ್. ಬಾಂಗ್ಲಾದ ಶೇಖ್ ಹಸೀನಾ ಹಾಗೂ ವಿವಿಧ ದೇಶದ ಮುಖ್ಯಸ್ಥರು, ಸಚಿವರು ಹಾಗೂ ಇತರರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.