ವಾಸ್ತವಿಕ ಹಾಗೂ ಸಮಾಜದ ಕಟು ಸತ್ಯಗಳನ್ನು ಸಿನಿಪರದೆಯ ಮೇಲೆ ಹದವಾಗಿ ತೋರಿಸಿ ಹೆಸರಾದ ವಿವೇಕ್ ಅಗ್ನಿಹೋತ್ರಿ, ಇದೀಗ ಇಂದಿಗೂ ನಿಗೂಢವಾಗೇ ಉಳಿದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಸಾವಿನ ಸತ್ಯಗಳನ್ನು ತೆರೆದಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.
’ಬುದ್ಧ ಇನ್ ಎ ಟ್ರಾಫಿಕ್ ಜಾಮ್’ ಚಿತ್ರದ ಮೂಲಕ ಕೆಂಪು ಭಯೋತ್ಪಾದನೆ ಹಾಗೂ ಎಡಪಂಥೀಯ ವಾದವನ್ನು ಲೆಫ್ಟ್ ಆಂಡ್ ರೈಟ್ ತೆಗೆದುಕೊಂಡು ಯಶಸ್ಸಿನ ಅಲೆಯಲ್ಲಿ ವಿವೇಕ ಇದ್ದಾರೆ.
51 ವರ್ಷಗಳು ಗತಿಸಿದರೂ ಶಾಸ್ತ್ರೀಜಿ ಅವರ ಸಾವು ಇಂದಿಗೂ ರಹಸ್ಯವಾಗೇ ಉಳಿದಿದೆ. ಓರ್ವ ಪ್ರಧಾನಿ ಮಂತ್ರಿಯ ಸಾವಿನ ಸತ್ಯ ತಿಳಿಯಲು ಯಾವ ಸರ್ಕಾರವೂ ತನಿಖೆಗೆ ಮುಂದಾಗುತ್ತಿಲ್ಲ ಎಂಬುದು ಗಮನಾರ್ಹ.
ತಜ್ಞರು ಇದು ನೈಸರ್ಗಿಕ ಸಾವಲ್ಲ, ಇದೊಂದು ವ್ಯವಸ್ಥಿತ ಕೊಲೆ. ಇದು ಒಳಸಂಚಿನಿಂದಾದ ಕೊಲೆ ಎಂಬುದು ಬಹಿರಂಗ ಗುಟ್ಟು ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಸ್ತ್ರೀಜಿ ತಾಷ್ಕೆಂಟ್ ಭೇಟಿಗೆ ಹೋದಾಗ ಈ ಘಟನೆ ನಡೆದಿದ್ದು, ಸಾವು ಘಟಿಸುವ ಮೊದಲ ದಿನ ಕೆಲವು ಕಠಿಣ ಘೋಷಣೆಗಳನ್ನು ಮಾಡಿದ್ದರೆಂದು ಅವರ ಜೊತೆಗಿದ್ದವರೇ ಹೇಳಿದ್ದರು. ಆದರೆ ಮರುದಿನ ಜ.11 ಅವರು ಇದಕ್ಕಿದ್ದಂತೆ ಶಾಸ್ತ್ರೀಜಿ ಸಾವಿನ ಸುದ್ದಿ ಭಾರತ ಹಾಗೂ ಪ್ರಪಂಚಕ್ಕೆ ಬರಸಿಡಿಲಿನಂತೆ ಬಡಿಯುತ್ತದೆ. ತಾಷ್ಕೆಂಟ್ ಒಪ್ಪಂದದ ನಂತರ, ಅವರು ಜಾನ್ ಮೊಹಮ್ಮದ (ಮಾಸ್ಕೋದ ಇಂಡಿಯನ್ ರಾಯಭಾರಿ ಮಿ.ಟಿ.ಎನ್.ಕೌಲ್ ಅವರ ಆಪ್ತ ಸಹಾಯಕ) ತಯಾರಿಸಿದ ಆಹಾರ ಸೇವಿಸುತ್ತಾರೆ.
ರಾತ್ರಿ 11.30 ರ ವೇಳೆಗೆ ಒಂದು ಗ್ಲಾಸ್ ಹಾಲು ಕುಡಿದು ಮಲಗುತ್ತಾರೆ. ಆದರೆ, 1.25 ರ ಸುಮಾರಿಗೆ ಕೆಮ್ಮು ಅತಿಯಾಗಿ ಎಚ್ಚರಗೊಂಡು ಸಿಬ್ಬಂದಿಗೆ ತಿಳಿಸಲು ರೂಮಿನಿಂದ ಹೊರಗೆ ಬರುತ್ತಾರೆ. ಅವರ ಖಾಸಗಿ ವೈದ್ಯ ಆರ್.ಎನ್. ಚೌ ಅಲ್ಲಿಗೆ ಬಂದಾಗ ಶಾಸ್ತೀಜಿ ಅವರು ಅಂತಿಮ ಹಂತಕ್ಕೆ ತಲುಪಿರುತ್ತಾರೆ. ಇದೊಂದು ಅಸಹಜ ಸಾವು ಎನಿಸಿದರೂ, ಮುಂದೆ ಈ ಸಾವಿನ ಹಿಂದಿನ ಸತ್ಯದ ಕುರಿತು ಸೂಕ್ತ ತನಿಖೆಯೇ ಆಗುವುದಿಲ್ಲ.
ಇದೀಗ ವಿವೇಕ್ ಅಗ್ನಿಹೋತ್ರಿ ಅವರು ಇದೇ ವಿಷಯ ವಸ್ತುವನ್ನಾಗಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಹಲವು ದಶಕಗಳಿಂದ ಶಾಸ್ತ್ರೀಜಿ ಸಾವಿನ ಹಿಂದಿನ ಸತ್ಯ ತಿಳಿಯಲು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇರುವವರು ಈ ಚಿತ್ರವನ್ನು ಬೆಂಬಲಿಸುವ ಅಗತ್ಯವಿದೆ. ಈ ಚಿತ್ರವು ಭಾರತದ ಓರ್ವ ಧೀಮಂತನಿಗೆ ಆದ ದ್ರೋಹದ ಚಿತ್ರಣ ಯುವಜನತೆಯನ್ನು ಬಡಿದೆಬ್ಬಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.