ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಚಿಂತಕ, ನೀತಿ ಆಯೋಗ ಶೀಘ್ರದಲ್ಲೇ ಬಡತನ ರೇಖೆ ವಿಚಾರವಾಗಿ ತಂತ್ರಜ್ಞರ ಸಮಿತಿಯನ್ನು ಸ್ಥಾಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಹುತೇಕ ರಾಜ್ಯಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೆ ಇದ್ದು, ಬಡತನ ರೇಖೆ ನೋಡಿಕೊಳ್ಳಲು ತಜ್ಞರ ಸಮಿತಿ ಎಂದು ಈ ಹಿಂದೆ ತಿಳಿಸಲಾಗಿತ್ತು. ಪ್ರಸ್ತುತ ಯಾವೂದೇ ಸಮಿತಿ ಇಲ್ಲದಿದ್ದು, ಇದನ್ನು ನೋಡಿಕೊಳ್ಳಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಿರ್ಧಾರಗಳ ಅನುಗುಣವಾಗಿ ಫೆ.8, 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿ ಮೊದಲ ಸಭೆ ನಡೆಸಿದ್ದು, ಮಾರ್ಚ್ 16, 2015ರಲ್ಲಿ ನೀತಿ ಆಯೋಗ ಉಪಾಧ್ಯಕ್ಷ ಅರವಿಂದ್ ಪಣಗಾರಿಯಾ ಅಧ್ಯಕ್ಷತೆಯಲ್ಲಿ ಭಾರತದಲ್ಲಿ ಬಡತನ ನಿರ್ಮೂಲನೆ ಹಾರ್ಯಪಡೆ ರಚಿಸಲಾಗಿತ್ತು. ಇದರ ಕಾರ್ಯಪಡೆ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ಜುಲೈ 11, 2015ರಂದು ನೀಡಲಾಗಿತ್ತು.
ಪ್ರಸ್ತುತ ಅಂದಾಜು ಬಡತನ ವರದಿಗಳು 2009ರಲ್ಲಿ ಸುರೇಶ್ ಡಿ. ತೆಂಡುಲ್ಕರ್ ಅವರ ಅಯಕ್ಷತೆಯಲ್ಲಿ ಶಿಫಾರಸ್ಸು ಮಾಡಲಾದ ತಜ್ಞರ ತಂಡದ ಕಾರ್ಯವಿಧಾನಗಳನ್ನು ಆಧರಿಸಿ ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.