ಗಾಂಧಿನಗರ: ಗುಜರಾತ್ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ 14 ವರ್ಷದ ಬಾಲಕ ತಾನು ವಿನ್ಯಾಸಗೊಳಿಸಿದ ಡ್ರೋನ್ಗಳ ಉತ್ಪಾದನೆಗೆ ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾನೆ.
10ನೇ ತರಗತಿ ವಿದ್ಯಾರ್ಥಿ ಹರ್ಷವರ್ಧನ್ ಝಾಲಾ, ಯುದ್ಧ ಭೂಮಿಗಳಲ್ಲಿ ಸ್ಫೋಟಕಗಳ ಪತ್ತೆ ಮತ್ತು ಅವುಗಳನ್ನು ನಿಶ್ಕ್ರಿಯಗೊಳಿಸಲು ಸಹಾಯಕವಾಗುವ ಡ್ರೋನ್ಗಳ ಉತ್ಪಾದನೆಗೆ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾನೆ.
ಒಂದು ಬಾರಿ ಟಿವಿ ನೋಡುತ್ತಿದ್ದ ಸಂದರ್ಭ ಸೈನಿಕರು ಕೈಯಾರೆ ಸ್ಫೋಟಕ ನಿಶ್ಕ್ರಿಯಗೊಳಿಸುವ ಸಂದರ್ಭ ಅವು ಸ್ಫೋಟಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಗಾಯಗೊಳ್ಳುತ್ತಿರುವುದು ತಿಳಿದು ಬಂದಿತೆು ಇದು ಸ್ಫೋಟಕ ನಿಶ್ಕ್ರಿಯ ಡ್ರೋನ್ ವಿನ್ಯಾಸಕ್ಕೆ ಪ್ರೇರಣೆಯಾಯಿತು ಎಂದು ಹರ್ಷವರ್ಧನ್ ಹೇಳಿದ್ದಾನೆ.
ಹರ್ಷವರ್ಧನ್ ೩ ಮಾದರಿಗಳ ಡ್ರೋನ್ಗಳನ್ನು ನಿರ್ಮಿಸಿದ್ದಾನೆ. ಈ ಡ್ರೀನ್ ಇನ್ಫ್ರಾರೆಡ್ ಆರ್ಜಿಬಿ ಸೆನ್ಸಾರ್, ಉಷ್ಣ ಪತ್ತೆ ಥರ್ಮಲ್ ಮೀಟರ್, ಯಾಂತ್ರಿಕ ಶಟರ್ನೊಂದಿಗೆ ಹೈ-ರೆಸೋಲ್ಯೂಶನ್ ಚಿತ್ರಗಳನ್ನು ತೆಗೆಯಬಲ್ಲ 21 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಹಾರಾಟದ ಸಂದರ್ಭ 8 ಚದರ ಅಡಿ ಎತ್ತರದಲ್ಲಿ ಅಲೆಗಳನ್ನು ಕಳುಹಿಸುವ ಸಾಮರ್ಥಯದೊಂದಿಗೆ ಡ್ರೋನ್ ವಿನ್ಯಾಸಗೊಳಿಸಲಾಗಿದ್ದು, ಇವು ಸ್ಫೋಟಕಗಳನ್ನು ಪತ್ತೆ ಹಚ್ಚಿ ಮೂಲ ಕೇಂದ್ರಕ್ಕೆ ಸ್ಥಳದ ಮಾಹಿತಿ ರವಾನಿಸುತ್ತದೆ. ಈ ಡ್ರೋನ್ ಸ್ಫೋಟಕ ನಾಶಗೊಳಿಸಲು 50 ಗ್ರಾಂ ತೂಕದ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾನೆ.
2016ರಲ್ಲೇ ಡ್ರೋನ್ ವಿನ್ಯಾಸ ಆರಂಭಿಸಲಾಗಿದ್ದು, ಹರ್ಷವರ್ಧನ್ ಈಗಾಗಲೇ ವ್ಯಾಪಾರ ಯೋಜನೆಯೊಂದಿಗೆ ಹಕ್ಕು ಸ್ವಾಮ್ಯದ ನೋಂದಣಿಯೊಂದಿಗೆ ‘ಏರೋಬೋಟಿಕ್ಸ್’ ಕಂಪೆನಿ ಸ್ಥಾಪಿಸಿದ್ದಾರೆ.
ಡ್ರೋನ್ಗಳ ಮುರು ಮಾದರಿಗಳನ್ನು ತಯಾರಿಸಲು 5 ಲಕ್ಷ ರೂ. ವೆಚ್ಚ ತಗುಲಿದ್ದು, ಆತನ ಪೋಷಕರು 2 ಲಕ್ಷ ರೂ. ವ್ಯಯಿಸಿದರೆ, ಮೂರನೇ ಡ್ರೋನ್ನ ಮಾದರಿಯ ರಚನೆಗೆ ಗುಜರಾತ್ ಸರ್ಕಾರ ೩ ಲಕ್ಷ ರೂ. ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.