ನವದೆಹಲಿ: ಪಂಜಾಬ್ನ ಮೊಗಾದಲ್ಲಿ ಕಳೆದ ವಾರ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿ ಬಸ್ನಿಂದ ಹೊರದಬ್ಬಿ ಕೊಂದ ಪ್ರಕರಣ ಮಂಗಳವಾರ ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷಿಸಿತು.
ಪಂಜಾಬ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟಿದೆ, ಇಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಬೇಕು ಎಂದು ಸಂಸದ ಅಮರೇಂದರ್ ಸಿಂಗ್ ಆಗ್ರಹಿಸಿದರು.
ಮೊಗಾ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ, ಬಸ್ ಮಾಲೀಕರ ಮೇಲೆ ಇನ್ನೂ ಪ್ರಕರಣ ದಾಖಲಿಸದ್ದು ದುರಾದೃಷ್ಟಕರ, ಸಿಎಂ ಪ್ರಕಾಶ್ ಸಿಂಗ್ ಬಾದಲ್ ಒಡೆತನದ ಬಸ್ ಕಂಪನಿ ಆರ್ಬಿಟ್ ಕೈವಾಡ ಈ ಪ್ರಕರಣದಲ್ಲಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭೆಯಲ್ಲೂ ಈ ಪ್ರಕರಣ ತೀವ್ರ ಗದ್ದಲವನ್ನು ಸೃಷ್ಟಿಸಿತು. ಬಾಲಕಿ ಸತ್ತಿದ್ದು ದೇವರ ಇಚ್ಛೆ ಎಂದು ಹೇಳಿದ ಸಚಿವ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಿಪಿಎಂ ಮುಖಂಡ ಸೀತಾರಾಂ ಯಚೂರಿ ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.