ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು.
1971ರ ಭಾರತ-ಪಾಕ್ ಯುದ್ಧದಲ್ಲಿ ಪಂಜಾಬ್ನ ಬಸಂತರ್ ಸೆಕ್ಟರ್ನಲ್ಲಿ ಕಾರ್ಯ ನಿರ್ವಹಿಸಿದ್ದ ‘ಮಹಾವೀರ ಚಕ್ರ’ ಪ್ರಶಸ್ತಿ ಪುರಸ್ಕೃತ ಥಾಮಸ್, ಅರಣ್ಮೂಲಾದಲ್ಲಿರುವ ತಮ್ಮ ೩ ಸೆಂಟ್ಸ್ ಸ್ಥಳದಲ್ಲಿ ೭ ಲಕ್ಷ ರೂ. ವೆಚ್ಚದಲ್ಲಿ ಯುದ್ಧ ಶೂರರಿಗಾಗಿ ಸ್ಮಾರಕ ನಿರ್ಮಿಸಿದ್ದಾರೆ.
ಥಾಮಸ್ ಅವರು ನಿರ್ಮಿಸಿದ ಅರಣಮೂಲಾದ ಎರುಮಕ್ಕಾಡ್ ಜಂಕ್ಷನ್ನಲ್ಲಿರುವ ‘ಜೈ ಜವಾನ್ ಮೆಮೋರಿಯಲ್’ನ ಉದ್ಘಾಟನೆ ಶನಿವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮಡ್ರಾಸ್ ರೆಜಿಮೆಂಟ್ನ ಯೋಧರು, ಭಾರತದ ಸ್ವಾತಂತ್ರ್ಯ ಯೋಧರು, ಸಶಸ್ತ್ರ ಪಡೆಗಳ ಮತ್ತು ಹಲವು ಯುದ್ಧಗಳಲ್ಲಿ ಹೋರಾಡಿದ ಹುತಾತ್ಮರ ಗೌರವಾರ್ಥವಾಗಿ ನಿರ್ಮಿಸಲಾಗಿರುವ ಈ ಸ್ಮಾರಕವನ್ನು ಶಾಸಕ ವೀಣಾ ಜಾರ್ಜ್ ಉದ್ಘಾಟಿಸಲಿದ್ದಾರೆ.
ಶನಿಬಾರದ ಉದ್ಘಾಟನಾ ಕಾರ್ಯಕ್ರಮದ ಮೊದಲು ವರ್ಣರಂಜಿತ ಮೆರವಣಿಗೆ ನಡೆಯಲಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಗಳು, ಸೈನಿಕರು, ಸಶಸ್ತ್ರ ಪಡೆ ಹಿರಿಯ ಅಧಿಕಾರಿಗಳು, ಎರುಮಕ್ಕಾಡ್ ಕಳ್ಳುವರಂಬ ಜಂಕ್ಷನ್ನಿಂದ ಸ್ಮಾರಕ ಆವರಣದ ವರೆಗೆ ತೆರಳುವ ಮೆರವಣಿಗೆಯಲ್ಲಿ ಭಾಗವಹಿಸಲಿದ್ದರೆ. ಮೆರವಣಿಗೆಯಲ್ಲಿ ಎನ್ಸಿಸಿ, ಸ್ಕೌಟ್ಸ್, ವಿದ್ಯಾರ್ಥಿ ಪೊಲೀಸ್ ಕ್ಯಾಡೆಟ್ ಮತ್ತು ಶಾಲಾ ವಿದ್ಯಾರ್ಥಿಗಳು ಜೊತೆಗೂಡಲಿದ್ದಾರೆ.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಪಿ.ವಿ. ಸಹದೇವನ್ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬ್ರಿಗೇಡಿಯರ್ ವರ್ಘೀಸ್ ಜೇಕಬ್ ಅಧ್ಯಕ್ಷತೆ ವಹಿಸಲಿದ್ದು, ಸ್ಮಾರಕ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ಸ್ವಾಗತಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.