ಹೈದರಾಬಾದ್: ಆಗಾ ಖಾನ್ ಅಕಾಡೆಮಿ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಎರಡನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೈದರಾಬಾದ್ ಆತಿಥೇಯವಾಗಿದೆ.
ಸುಮಾರು 70 ಅಂತಾರಾಷ್ಟ್ರೀಯ ಮತ್ತು 40 ರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ.
ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಾ, ವಿದೇಶಿ ಗಾಳಿಪಟ ಹಾರಾಟಗಾರನೊಬ್ಬ ಮತ್ತೆ ಮುಂದಿನ ವರ್ಷ ತಮ್ಮ ಸ್ನೇಹಿತರೊಂದಿಗೆ ಬಂದು ಗಾಳಿಪಟವನ್ನು ಹಾರಿಸುವುದಾಗಿ ಹೇಳಿದರು.
ಗಾಳಿಪಟ ಉತ್ಸವ 2017, ಜ.12-17ರ ವರೆಗೆ ನಡೆಯಲಿದೆ. ಸುಮಾರು 50,000 ಜನರು ಉತ್ಸವಕ್ಕೆ ಆಗಮಿಸಲಿದ್ದಾರೆ ಎಂಧು ನಿರೀಕ್ಷಿಸಲಾಗಿದೆ. ತೆಲಂಗಾಣ ಪ್ರವಾಸೋದ್ಯಮ ಮತ್ತು ಆಗಾ ಖಾನ್ ಅಕಾಡೆಮಿ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ.
ಗಾಳಿಪಟ ಉತ್ಸವ ವಿಶೇಷವಾಗಿರಲಿದ್ದು, ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಾದೇಶಿಕ ಆಹಾರ ಮತ್ತು ಕರಕುಶಲ ಮೇಳ ಇರಲಿದೆ ಎಂದು ತೆಲಂಗಾಣ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಬಿ. ವೆಂಕಟೇಶಮ್ ಹೇಳಿದ್ದಾರೆ.
ಈ ಉತ್ಸವ ವಿಶೇಷವಾಗಿರಲಿದ್ದು, ಸಾಮಾನ್ಯ ಗಾಳಿಪಟಗಳ ಬದಲು ರೀಚಾರ್ಜ್ ಬ್ಯಾಟರಿ ಪ್ರೋಪೆಲ್ಲರ್ಗಳು ರಿಮೋಟ್ ನಿಯಂತ್ರಕಗಳ ಸಹಾಯದಿಂದ ಗಾಳಿಪಟ ಹಾರಾಟ ನಡೆಸಲಾಗುವುದು. ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಗಾಳಿಪಟ ಉತ್ಸವ 2017 ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಬಲೀಕರಣಕ್ಕೆ ಬದ್ಧವಾಗಿದೆ. ಇದು ಒಂದು ರಾಷ್ಟ್ರವಾಗಿ ನಾವು ನಮ್ಮ ಪಗತಿಯ ನಿರ್ಣಾಯಕ ಅಂಶಗಳ ಅರಿವೆ ಮತ್ತು ಬೆಂಬಲಕ್ಕೆ ಆಧಾರವಾಗಿದೆ ಎಂದು ಪಿ.ವಿ. ಸಿಂಧು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.