ಮುಂಬಯಿ: ಡಿಜಿಟಲ್ ಜಾಹೀರಾತು ಮತ್ತು ಒಟಿಟಿ ನೇತೃತ್ವದ ಭಾರತದ ಡಿಜಿಟಲ್ ಕಾರ್ಯಕ್ಷೇತ್ರ 2020ರ ವೇಳೆಗೆ 20,000 ಕೋಟಿ ರೂ. ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಇದು ೮,೪೯೦ ಕೋಟಿ ಇದೆ.
ಭಾರತೀಯ ಡಿಜಿಟಲ್ ಕ್ಷೇತ್ರ ಬೆಳವಣಿಗೆಯ ಕೊನೆಯ ಹಂತ ತಲುಪಿದೆ. ಮೊಬೈಲ್ ವಲಯ ಶೇ.100 ಪ್ರಮಾಣದಲ್ಲಿ ಮುನ್ನುಗ್ಗುತ್ತಿದ್ದು, ಇಂಟರ್ನೆಟ್ ಮತ್ತು ಟಿವಿ ಸೇವೆ ವಿಶ್ವದ ಸರಾಸರಿ ಹಂತಕ್ಕಿಂತ ಕೆಳಮಟ್ಟದಲ್ಲಿದೆ. ಆದಾಗ್ಯೂ ಭಾರತದ ಡಿಜಿಟಲ್ ಮಾಧ್ಯಮ ಮಾರುಕಟ್ಟೆ ವಿಶಿಷ್ಟ ಅವಕಾಶಗಳನ್ನು ಒದಗಿಸುತ್ತಿದೆ.
ಡಿಜಿಟಲ್ ಕ್ಷೇತ್ರ ಹೊಸ ಇಂಟರ್ನೆಟ್ ಬಳಕೆದಾರರ ಪ್ರವೇಶದೊಂದಿಗೆ ೨೦೨೦ರ ವೇಳೆಗೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 746 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಡಿಜಿಟಲ್ ವೇದಿಕೆಗೆ ಪರಿಚಯಿಸಲ್ಪಡಲಿದ್ದಾರೆ ಎಂದು ಹೇಳಲಾಗಿದೆ ಎಂದು ಡಿಜಿಟಲ್ ಅವಕಾಶ ಕುರಿತು EY-vdonxt ವರದಿ ಮಾಡಿದೆ.
2016ರಲ್ಲಿ 8,490 ಕೋಟಿ ರೂ. ಡಿಜಿಟಲ್ ಆದಾಯದ ಪ್ರಮುಖ ನಾಲ್ಕು ಕ್ಷೇತ್ರಗಳೆಂದರೆ ಒಟಿಟಿ ಮತ್ತು ಡಿಜಿಟಲ್ ಜಾಹೀರಾತು, ವೀಡಿಯೋ ಒಟಿಟಿ ಚಂದಾ, ಮ್ಯೂಸಿಕ್ ಒಟಿಟಿ ಚಂದಾ ಮತ್ತು ಗೇಮಿಂಗ್ (ಆ್ಯಪ್ ಮತ್ತು ಶುಲ್ಕ).
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.