ಮುಂಬಯಿ: ಕಳೆದ ವರ್ಷ ಭಾರತ-ಪಾಕಿಸ್ಥಾನ ಗಡಿಯಲ್ಲಿ ಅಜಾರೂಕತೆಯಿಂದ ಗಡಿ ದಾಟಿದ್ದ ಭಾರತದ ಸೈನಿಕ ಚಂದು ಚವಾಣ್ನನ್ನು ಬಿಡುಗಡೆ ಮಾಡಲು ಪಾಕ್ ಮಿಲಿಟರಿ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಗುರುವಾರ ತಿಳಿಸಿದ್ದಾರೆ.
ಅವರು (ಪಾಕಿಸ್ಥಾನ) ಚಂದು ಚವಾಣ್ ಜೀವಂತವಾಗಿರುವುದಾಗಿ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಕೊನೆ ಹಂತದ ವಿಚಾರಣೆ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಭಾಮ್ರೆ ಅವರು ಎರಡನೇ ಸ್ಕಾರ್ಪೀನ್ ವರ್ಗದ ನೌಕೆ ಖಂಡೇರಿ ಅನಾವರಣಗೊಳಿಸಿದ ಬಳಿಕ ಮುಂಬಯಿಯ ಮಡ್ಗಾಂವ್ ಡಾಕ್ ಲಿಮಿಟೆಡ್ನಲ್ಲಿ ತಿಳಿಸಿದ್ದಾರೆ.
ನಾವು ಚಂದು ಚವಾಣ್ ಬಿಡುಗಡೆಗೆ ಡಿಜಿಎಂಒ (ಮಿಲಿಟರಿ ನಿರ್ವಹಣೆಗಳ ಮಹಾನಿರ್ದೇಶಕ) ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ಭಾರತದ ಡಿಜಿಎಂ ಈವರೆಗೆ ಪಾಕ್ ಡಿಜಿಎಂ ಜೊತೆ ಈವರೆಗೆ 15-20 ಬಾರಿ ಮಾತುಕತೆ ನಡೆಸಿರುವುದಾಗಿ ಭಾಮ್ರೆ ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಾತುಕತೆ ನಡೆಸಲಾಗಿದ್ದು, ವಿಚಾರಣೆ ಕೊನೆ ಹಂತ ತಲುಪಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪಾಕ್ ತಿಳಿಸಿದೆ. ಚಂದು ಚವಾಣ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಭಾಮ್ರೆ ತಿಳಿಸಿದ್ದಾರೆ.
2016ರ ಸೆಪ್ಟೆಂಬರ್ 30ರಂದು ಚಂದು ಚವಾಣ್ ಅಜಾರೂಕರತೆಯಿಂದ ಗಡಿ ನಿಯಂತ್ರಣ ರೇಖೆ ದಾಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.