ನವದೆಹಲಿ: ಮಣಿಪುರದ ನಿಷೇಧಿತ ಕಮ್ಯುನಿಸ್ಟ್ ಪಕ್ಷವೊಂದರ ಮುಖ್ಯಸ್ಥನನ್ನು ಹಾಗೂ ಅವನ ಜೊತೆಗಿದ್ದ ಓರ್ವ ಮಹಿಳೆಯನ್ನು ದೆಹಲಿ ಪೂರ್ವ ಭಾಗದ ಪೊಲೀಸರು ಬಂಧಿಸಿದ್ದಾರೆ.
ಮಣಿಪುರದಲ್ಲಿ ನಡೆದ ಅನೇಕ ಉಗ್ರರ ದಾಳಿಯೊಂದಿಗೆ ಸಂಬಂಧ ಹೊಂದಿದ್ದ ಕೊಹಿರಾಂ ರಂಜಿತ್ ಅಕಾ ರಾಕಿ ಅಕ ಗ್ರೇಟ್ ಮಚಾ ಎಂಬುವವನನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಗುರುವಾರ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜೊತೆಗೆ, ಎನ್ಎಸ್ಸಿಎನ್ (ನ್ಯಾಶನಲ್ ಸೋಶಿಯಲಿಸ್ಟಿಕ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್)ನ ಮೂವರನ್ನು ತೌಬಲ್ ಜಿಲ್ಲೆಯ ವಿವಿಧ ಸ್ಥಳಗಳಿಂದ ಮಣಿಪುರ ಪೋಲಿಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತೈಸೆಮ್ ಗ್ರಾಮದಲ್ಲಿ ಬುಧವಾರ ಎಸ್ಪಿ ಎಂ.ಪ್ರದೀಪ್ ಅವರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 3 ಗಂಟೆಯ ವೇಳೆ 7 ಮಂದಿಯನ್ನು ಅಧಿಕೃತ ಗುರುತಿನ ಚೀಟಿಗಳನ್ನು ಹೊಂದಿರದ ಕಾರಣ ಬಂಧಿಸಿದ್ದರು. ಅವರಲ್ಲಿ ಮೂವರು ಎನ್ಎಸ್ಸಿಎನ್ ಸಂಘಟನೆಯ ಮಾಜಿ ಸದಸ್ಯರಾಗಿದ್ದರು.ಅವರನ್ನು ಪಲ್ಲೇಲ್ ಪೊಲೀಸ್ ಠಾಣೆಗೆ ಪರಿಶೀಲನೆಗಾಗಿ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದರು.
4 ಎಸ್ಎಸ್ಬಿಎಲ್ ಗನ್ಗಳು, ಒಂದು ಶಸ್ತ್ರಾಸ್ತ್ರವನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.