ನವದೆಹಲಿ : ರಾಜಕೀಯವಾಗಿ ಭೂಕಂಪವನ್ನೇ ಸೃಷ್ಟಿಸಲು ಯತ್ನಿಸಿದ ರಾಹುಲ್ ಗಾಂಧಿ ಅವರು, ಸಹಾರ ಡೈರಿ ಪ್ರಕರಣದಲ್ಲಿ ಮೋದಿ ಅವರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಇದೇ ಪ್ರಕರಣದ ತನಿಖೆಗೆ ಆಗ್ರಹಿಸಿ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಅರ್ಜಿ) ಅನ್ನು ಸುಪ್ರೀಂ ಇಂದು ವಜಾಗೊಳಿಸಿದೆ.
ಕೇವಲ ಡೈರಿಗಳ ಆಧಾರದ ಮೇಲೆ ತನಿಖೆ ನಡೆಸಲು ಆಗದು. ಸಾಕ್ಷ್ಯವು ಸ್ವೀಕಾರಾರ್ಹ ವಾಗಿರಬೇಕು. ಇಲ್ಲದಿದ್ದಲ್ಲಿ ಸಾಂವಿಧಾನಿಕ ಕಾರ್ಯ ನಡೆಸಲು ಆಗದು ಹಾಗೂ ಇದು ಪ್ರಜಾಪ್ರಭುತ್ವದ ಸುರಕ್ಷತೆಯ ದೃಷ್ಟಿಯಿಂದ ಬಹು ಅಪಾಯಕಾರಿ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
ನ. 14 ರಂದು ಕೂಡಾ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಅರ್ಜಿಯನ್ನು ಇದೇ ಕಾರಣ ನೀಡಿ ವಜಾಗೊಳಿಸಿತ್ತು. ಇದೀಗ ಹಿರಿಯ ವಕೀಲ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದಂತಾಗಿದೆ.
ಸಹಾರಾ ಡೈರಿಗಳು 2013-14 ರಲ್ಲಿ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯಿಂದ ವಶಪಡಿಸಿಕೊಂಡ ದಾಖಲೆಗಳ ಸಂಗ್ರಹ ಅಷ್ಟೇ. ಈ ರೀತಿಯ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸುವುದು ಉಚಿತವಲ್ಲ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದಿಸಿದರು.
ಸಹಾರಾ ಡೈರಿಯಲ್ಲಿ ವಿವಿಧ ಪಕ್ಷಗಳ ಮುಖಂಡರ ಹೆಸರೂ ಇದ್ದು, ಕಾಂಗ್ರೆಸ್ನ ಶೀಲಾ ದೀಕ್ಷಿತ್ ಹಾಗೂ ಮೋದಿ ಅವರ ಹೆಸರೂ ಅದರಲ್ಲಿ ಪ್ರಸ್ತಾಪವಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.