ನವದೆಹಲಿ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ ಹಾಸ್ಯಾಸ್ಪದ ಎಂದು ಹೇಳಿರುವ ಬಿಜೆಪಿ, ಸುದೀರ್ಘ ಕಾಲದ ಬಳಿಕ ಮೊದಲ ಬಾರಿಗೆ ರಾಷ್ಟ್ರದ ಬಡವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಸಬಲರನ್ನಾಗಿಸಿದೆ ಎಂದು ಹೇಳಿದೆ.
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಯೂರೋಪ್ ಪ್ರವಾಸದಿಂದ ಭಾರತಕ್ಕೆ ಮರಳಿದ್ದು, ದೇಶದ ಜನತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ರಾಹುಲ್ ಗಾಂಧಿ ಓರ್ವ ಅರೆಕಾಲಿಕ ರಾಜಕಾರಣಿ. ಅವರು ಈಗಷ್ಟೇ ರಜೆ ಮುಗಿಸಿ ಹಿಂದಿರುಗಿದ್ದಾರೆ. ಅವರು ದೇಶದ ಜನತೆ ಬಗ್ಗೆ ನಿಜಕ್ಕೂ ಕಾಳಜಿ ವಹಿಸುತ್ತಿದ್ದರೆ ವಿಹಾರಕ್ಕಾಗಿ ಯೂರೋಪ್ಗೆ ಹೋಗುತ್ತಿರಲಿಲ್ಲ ಎಂದು ಬಿಜೆಪಿ ನಾಯಕ ಶಹಾನವಾಜ್ ಹುಸೇನ್ ಹೇಳಿದ್ದಾರೆ.
ಇದೇ ವೇಳೆ ದೇಶದ ವಿವಿಧ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕಾಂಗ್ರೆಸ್ ನಾಶ ಮಾಡಿದೆ ಎಂದು ಬಿಜೆಪಿ ವಕ್ತಾರ ಸಾಂಬಿತ್ ಪಾತ್ರಾ ಹೇಳಿದ್ದಾರೆ.
ಹಲವು ಸಂಸ್ಥೆಗಳನ್ನು ದೇಶದ ಆತ್ಮವಿದ್ದಂತೆ ಎಂದು ತಮ್ಮ ಭಾಷಣದಲ್ಲಿ ಹೇಳಿದ ರಾಹುಲ್ ಗಾಂಧಿ ತಾತ್ವಿಕರಾಗಿದ್ದರು. ಸಿಬಿಐಯನ್ನು ಪಂಜರದ ಗಿಳಿಯಂತೆ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಅಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ರಾಹುಲ್ ಗಾಂಧಿಗೆ ನೆನಪಿಸಬೇಕಿದೆ ಎಂದು ಸಾಂಬಿತ್ ಪಾತ್ರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.