ವಾರಣಾಸಿ: ವಾರಣಾಸಿಯಲ್ಲಿ ಮಕ್ಕಳ ಗುಂಪೊಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶದ ಬದಲಾವಣೆಯಲ್ಲಿ ಯುವ ಸಮುದಾಯ ಮುಖ್ಯ ಪಾತ್ರವಹಿಸುತ್ತದೆ ಆದರೆ ಈಗ ಚಿಕ್ಕ ಮಕ್ಕಳು ಕೂಡ ರಚನಾತ್ಮಕ ಬದಲಾವಣೆಗೆ ಕಾರಣರಾಗುತ್ತಿದ್ದಾರೆ.
ವಾರಣಾಸಿಯ ಈ ಮಕ್ಕಳು ತಮ್ಮ ಪಟ್ಟಣದಲ್ಲಿ ಶೌಚಾಲಯಗಳ ನಿರ್ಮಾಣವಾದರೂ ಯಾವುದೇ ಮಕ್ಕಳ ಸ್ನೇಹಿ ಮೂತ್ರಾಲಯಗಳು ಇಲ್ಲದಿರುವುದನ್ನು ಅರಿತ ನಂತರ ಮೂತ್ರಾಲಯಗಳನ್ನು ಕಟ್ಟಲು ಒಂದು ಅಭಿಯಾನವನ್ನು ಆರಂಭಿಸಿದರು.
ಪ್ರಗತಿ ಪಥ ಫೌಂಡೇಷನ್ ಎಂಬ ಎನ್ಜಿಓ ಜೊತೆ ಚರ್ಚೆ ನಡೆಸಿದ ಮಕ್ಕಳ ಸಂಘ, ಅದರ ಮೂಲಕ ಸ್ಥಳೀಯ ಪದಾಧಿಕಾರಿಗಳಿಗೆ ತಮ್ಮ ಕಲ್ಪನೆ ಮತ್ತು ಅವಶ್ಯಕತೆಗಳನ್ನು ತಿಳಿಸಿತು. ಇದರ ಪರಿಣಾಮವಾಗಿ ಪಟ್ಟಣದಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದ್ದ ಸುಲಭ ಇಂಟರ್ನ್ಯಾಶನಲ್ಗೆ ಮಕ್ಕಳ ಸ್ನೇಹಿ ಮೂತ್ರಾಲಯಗಳನ್ನು ಕಟ್ಟಲು ವಾರಣಾಸಿ ಪುರಸಭೆ ನಿರ್ದೇಶನ ನೀಡಿತು.
ಮಕ್ಕಳ ಈ ಕ್ರಮದಿಂದ ಪ್ರೋತ್ಸಾಹಗೊಂಡ ಪುರಸಭೆ, ಮಕ್ಕಳ-ಸ್ನೇಹಿ ಸ್ಮಾರ್ಟ್ ಸಿಟಿ ನಿರ್ಮಿಸಲು ಸಲಹೆಗಳನ್ನು ಆಮಂತ್ರಿಸಿತು.
ಈ ಮಕ್ಕಳ ಸಂಘ ಸಾರ್ವಜನಿಕ ಸ್ಥಳಗಳಲ್ಲಿ ಕಸ-ಕಡ್ಡಿ ಹಾಕಬಾರದು ಎಂದು ಮನವಿ ಮಾಡಿತು ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಮಾಜದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತಾ ಕೆಲಸಗಳನ್ನೂ ಮಾಡುತ್ತದೆ.
ಸ್ವಚ್ಛ ಭಾರತ ಅಭಿಯಾನದಲ್ಲಿ ಮಕ್ಕಳ ಭಾಗವಹಿಸುವಿಕೆ ಸ್ವಾಗತಾರ್ಹ ಮತ್ತು ಜನರನ್ನು ಪ್ರೇರೆಪಿಸುವಸುವ ಶಕ್ತಿಯನ್ನೂ ಹೊಂದಿದೆ. ಮಕ್ಕಳ ಈ ಕ್ರಮವು ಸ್ವಚ್ಛತಾ ಅಭಿಯಾನದ ಯಶಸ್ಸಿನ ಬಗ್ಗೆ ಭರವಸೆಯನ್ನು ಮೂಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.