ಪ.ಬಂಗಾಲ: ಪ್ರಧಾನಿ ಮೋದಿ ಅವರ ಕ್ಯಾಶಲೆಸ್ ಕನಸಿಗೆ ಪೂರಕವಾಗಿ ಪ.ಬಂಗಾಲದ ಪೂರ್ವ ಸಿಂಗ್ಭುಮ್ ಜಿಲ್ಲೆಯಲ್ಲಿ ನಗದು ರಹಿತ ಮದುವೆಯೊಂದು ಜರುಗಿದೆ.
ಜಿಲ್ಲೆಯ ಬಾಡಿಯಾದಲ್ಲಿನ ಒಂದು ದೇವಸ್ಥಾನದಲ್ಲಿ ಈ ಮದುವೆ ಸೋಮವಾರ ನಡೆದಿದ್ದು, ಅದಕ್ಕೂ ಕೆಲವು ಗಂಟೆಗಳ ಮೊದಲು ವರನ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸುವ ಮೂಲಕ ಭಾರತ ಸ್ವಚ್ಛ ಅಭಿಯಾನಕ್ಕೂ ಬೆಂಬಲ ಸೂಚಿಸಿದಂತಾಗಿದೆ.
ಇದೇ ಭಾನುವಾರ (ಜ.೮) ಪಶ್ಚಿಮ್ ಸಿಂಗ್ಭುಮ್ ಜಿಲ್ಲೆಯ ಇತಿಹಾಸ ಎಂಬ ಗ್ರಾಮದ ವಧು ಸುನಿತಾ ಅವರ ಮನೆಯ ಸದಸ್ಯರು ಮತ್ತು ವರ ಸುಭಾಷ್ ನಾಯಕ ಅವರ ಕುಟುಂಬ ಸದಸ್ಯರು ಕೂಡಿ, ನಾಯಕ ಅವರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕೈ ಜೋಡಿಸಿ ಆದರ್ಶ ಮೆರೆದಿದ್ದಾರೆ.
ಭಾನುವಾರ ರಾತ್ರಿ ಆರಂಭವಾಗಿ ಸೋಮವಾರ ಮದುವೆಗೂ ಮುನ್ನ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು ಎಂದು ಡಿಸಿ ಸಂಜಯ್ ಕುಮಾರ್ ಹೇಳಿದ್ದಾರೆ.
ಡಿಸಿ ಸಂಜಯ್ ಕುಮಾರ್ ಅವರೇ, ಎರಡೂ ಕುಟುಂಬಗಳಿಗೆ ಕ್ಯಾಶ್ಲೆಸ್ ಮದುವೆಗೆ ಮನವರಿಕೆ ಮಾಡಿದ್ದು, ಮದುವೆಯ ಮಂಟಪದ ಬಾಡಿಗೆಯಿಂದ ಎಲ್ಲ ತರಕಾರಿ, ದಿನಸಿ ಹಾಗೂ ಆಭರಣಾದಿಗಳ ಖರೀದಿಯನ್ನೂ ನಗದು ರಹಿತವಾಗಿಯೇ ಮಾಡಿ ಪ್ರಧಾನಿ ಮೋದಿ ಅವರ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದಾರೆ.
ಪುರೋಹಿತರ ದಕ್ಷಿಣೆ ಹಾಗೂ ವಧು ವರರಿಗೆ ನೀಡಿದ ಉಡುಗೊರೆಗಳೂ ಚೆಕ್, ಆನ್ಲೈನ್ ಮೂಲಕವೇ ಆಗಿದ್ದು ವಿಶೇಷ. ಎರಡೂ ಕುಟುಂಬಗಳು ಹಾಗೂ ಗ್ರಾಮಸ್ಥರು ಇಂತಹ ಅಪರೂಪದ ಕ್ಯಾಶಲೆಸ್ ಮದುವೆಯಲ್ಲಿ ಭಾಗಿಯಾಗಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕುಮಾರ್ ಅವರ ಪ್ರಕಾರ ನೋಟು ಅಮಾನ್ಯೀಕರಣದ ನಂತರ ರಾಜ್ಯದಲ್ಲಾದ ಮೊದಲ ಕ್ಯಾಶಲೆಸ್ ಮದುವೆ ಇದು ಎಂದರು. ಬಿಜೆಪಿ ಶಾಸಕ ಲಕ್ಷ್ಮಣ ತುಡು, ಸರ್ಕಲ್ ಆಫೀಸರ್ ಸದುಚರಣ್ ದೇವಗಮ್, ಡಿವೈಎಸ್ಪಿ ಅಜಿತ್ಕುಮಾರ್ ವಿಮಲ್, ಪರಿಸರವಾದಿ ಜಮುನಾ ತುಡು ಹಾಗೂ ಇತರರು ವಧು ವರರಿಗೆ ಚೆಕ್ ಮೂಲಕವೇ ಉಡುಗೊರೆ ನೀಡಿ ಶುಭ ಹಾರೈಸಿದರು.
ವಧು ವರರ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಜಂಟಿ ಖಾತೆಯನ್ನು ತೆರೆದಿದ್ದು, ಎಟಿಎಂ ಕಾರ್ಡ್ ಕೂಡಾ ಮದುವೆ ನಂತರ ನೀಡಲಾಯಿತು. ಗ್ರಾಮದ ಬಹುತೇಕ ಜನರು ಈ ಕ್ಯಾಶಲೆಸ್ ಮದುವೆಗೆ ಸಾಕ್ಷಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.