ಮಧ್ಯಪ್ರದೇಶ: ಮುಂದಿನ ಮೂರು ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಪ್ರತಿಶತ 60 ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೂಲಕ ಪ್ರಧಾನಿ ಮೋದಿ ಅವರ ಸ್ವಾವಲಂಬಿ ದೇಶದ ಕನಸಿಗೆ ಇದು ಸಹಕಾರಿಯಾಗಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದಾರೆ.
ಭಾರತವು ಪ್ರಪಂಚದ ದೊಡ್ಡ ದ್ವಿದಳ ಧಾನ್ಯದ ಗ್ರಾಹಕ. ಪ್ರೊಟೀನ್ಭರಿತ ಆಹಾರದ ಕೊರತೆಯನ್ನು ಭಾರತವು ಎದುರಿಸುತ್ತಿದ್ದು, ಒಂದು ವರ್ಷಕ್ಕೆ $ 2.65 ಶತಕೋಟಿ ಮೌಲ್ಯದಷ್ಟು ವಿರಳವಾದ ಧಾನ್ಯವನ್ನು ಕೆನಡಾ, ಆಸ್ಟ್ರಿಯಾ ಮತ್ತು ಇಥಿಯೊಪಿಯಾಗಳಿಂದ ಆಮದು ಮಾಡಿಕೊಳ್ಳುತ್ತಿದೆ.
ದ್ವಿದಳ ಧಾನ್ಯದಲ್ಲಿ ನಮ್ಮ ದೇಶವು ಸ್ವಾವಲಂಬಿಯಾಗಲು ಮಧ್ಯಪ್ರದೇಶದಲ್ಲಿ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ಮೋದಿಯವರು ನನಗೆ ಹೇಳಿದ್ದರು ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಮಧ್ಯಪ್ರದೇಶವು ಉನ್ನತ ಸ್ಥಾನದಲ್ಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 8 ರಿಂದ 8.5 ಮಿಲಿಯನ್ ಟನ್ಗಳಷ್ಟು (ಇದುವರೆಗೆ 5 ಮಿಲಿಯನ್ ಟನ್ ಇದೆ) ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವ ಗುರಿ ಇದೆ ಎಂದು ಅವರು ಹೇಳಿದ್ದಾರೆ.
ಪ್ರೋಟಿನ್ನ ಅಂಶಗಳು ದ್ವಿದಳ ಧಾನ್ಯದಲ್ಲೇ ಪ್ರಾಥಮಿಕವಾಗಿ ಹೆಚ್ಚಾಗಿರುವುದಲ್ಲದೇ, ಇದು ಬಡವರಿಗೂ ಹೆಚ್ಚು ಅವಶ್ಯಕ. ಅದಕ್ಕೇ, ಎಲ್ಲಿಯೇ ಆಗಲಿ ದ್ವಿದಳ ಧಾನ್ಯಗಳ ಬೆಲೆ ಏರಿಕೆಯಾದರೆ ಸರ್ಕಾರಗಳ ವಿರುದ್ಧ ಪ್ರತಿಭಟನೆಗಳಾಗುತ್ತವೆ ಎಂದು ತಿಳಿಸಿದ್ದಾರೆ.
ದ್ವಿದಳ ಧಾನ್ಯ ಬೆಳೆಯಲು ರೈತರಿಗೂ ಅಗತ್ಯ ಅನುದಾನ, ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
2015-16 ರಲ್ಲಿ ದೇಶಿ ಬೆಲೆಯು ದುಪ್ಪಟ್ಟು ಆದಾಗ, ದಾಖಲೆಯ 5.8 ಮಿಲಿಯನ್ ಟನ್ಗಳಷ್ಟು ದ್ವಿದಳಧಾನ್ಯವನ್ನು ಆಮದು ಮಾಡಿಕೊಳ್ಳಲಾಯಿತು. 2020 ರ ವೇಳೆಗೆ ದ್ವಿದಳ ಧಾನ್ಯದಲ್ಲಿ ಭಾರತ ಸ್ವಾವಲಂಬಿಯಾಗಿರಬೇಕೆಂದು ಮೋದಿ ಅವರ ಕನಸು. ಆ ನಿಟ್ಟಿನಲ್ಲಿ ನಾವು ಸರ್ವರೀತಿಯಿಂದಲೂ ಪ್ರಯತ್ನಿಸುತ್ತೇವೆ ಎಂದು ಶಿವರಾಜ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.