ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬ ಮಾಹಿತಿ ನಮಗೆ ತಿಳಿದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಂಗಳವಾರ ಲೋಕಸಭೆಯಲ್ಲಿ ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧುರಿ ಹೇಳಿಕೆ ನೀಡಿದ್ದಾರೆ.
ದಾವೂದ್ ಎಲ್ಲಿದ್ದಾನೆ ಎಂಬುದು ಭಾರತದ ಗುಪ್ತಚರ ಇಲಾಖೆಗೂ ತಿಳಿದಿಲ್ಲ, ಒಂದು ಸಾರಿ ಆತ ಇರುವ ಜಾಗ ಪತ್ತೆಯಾದರೆ ತಕ್ಷಣವೇ ಆತನನ್ನು ಬಂಧಿಸುವ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ಥಾನದ ಕರಾಚಿಯಲ್ಲಿದ್ದಾನೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು, ವಿದೇಶಿ ಮೂಲಗಳು ಕೂಡ ಇದನ್ನೇ ಹೇಳಿದ್ದವು. ಆದರೀಗ ಸರ್ಕಾರ ಉಲ್ಟಾ ಹೊಡೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
1993ರ ಮುಂಬಯಿ ಸ್ಪೋಟ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ದಾವೂದ್ ಭಾರತಕ್ಕೆ ಬೇಕಾದ ಆರೋಪಿಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.