ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ದಿನಗಳ ಹಿಂದೆಷ್ಟೇ ಬಿಡುಗಡೆ ಮಾಡಿದ್ದ ‘ಭೀಮ್’ ಆ್ಯಪ್ ಇದೀಗ 10 ಮಿಲಿಯನ್ ಡೌನ್ಲೋಡ್ ಆಗಿದೆ ಹಾಗೂ ‘ಭೀಮ್’ ಆ್ಯಪ್ ಮೂಲಕ ನಡೆಸುವ ವಹಿವಾಟು ಮಿತಿಯನ್ನು ಶೀಘ್ರದಲ್ಲೇ ಏರಿಸುವುದಾಗಿ ಮೋದಿ ಹೇಳಿದ್ದಾರೆ.
‘ಭೀಮ್’ ಆ್ಯಪ್ನ್ನು (ಭಾರತ್ ಇಂಟರ್ ಫೇಸ್ ಮನಿ) ಬಹಳಷ್ಟು ಜನರು ಬಳಸುತ್ತಿದ್ದಾರೆ ಆದಕಾರಣ, ಎನ್ಪಿಸಿಐ ವ್ಯವಹಾರಿಕ ಮೌಲ್ಯದಲ್ಲಿ ವಹಿವಾಟು ಮಿತಿಯನ್ನು ಹೆಚ್ಚಿಸುವ ಬಗ್ಗೆ ಪರಿಗಣಿಸುತ್ತಿದೆ (ಸದ್ಯ ಪ್ರತಿ ಬಳಕೆದಾರನಿಗೆ ದಿನಕ್ಕೆ 20,000 ಮತ್ತು 1 ಬಾರಿಗೆ 10000 ಒಂದು ವಾಹಿವಾಟಿಗೆ ಸೀಮಿತಗೊಳಿಸಲಾಗಿದೆ). ಪ್ರಸ್ತುತ ಯುಎಸ್ಎಸ್ಡಿ ಮಿತಿಯನ್ನು ಒಂದು ದಿನಕ್ಕೆ 5000 ರೂ. ವರೆಗೆ ಹೊಂದಿಸಲಾಗಿದೆ ಎಂದು ಟ್ವೀಟ್ಟರ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
‘ಭೀಮ್’ ಆ್ಯಪ್ ಬಿಡುಗಡೆಯಾದ ಕೇವಲ 10 ದಿನದೊಳಗೆ ಹತ್ತು ಮಿಲಿಯನ್ನಷ್ಟು ಜನ ಅಳವಡಿಸಿಕೊಂಡಿದ್ದಾರೆ ಹಾಗೂ ಯುಪಿಐ ಮತ್ತು ಯುಎಸ್ಎಸ್ಡಿ ನಲ್ಲಿ ಸುಮಾರು 2 ಮಿಲಿಯನ್ಕ್ಕಿಂತಲೂ ಹೆಚ್ಚು ವ್ಯವಹಾರವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
‘ಭೀಮ್’ ಆ್ಯಪ್ ನಿರೀಕ್ಷೆಗೂ ಮೀರಿದಷ್ಟು ಬಳಕೆಯಿಂದಾಗಿ ಜನಪ್ರಿಯತೆ ಪಡೆದಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಅತ್ಯಂತ ವೇಗವಾಗಿ ಮತ್ತು ಅತೀ ಹೆಚ್ಚು ರೇಟಿಂಗ್ ಹೊಂದಿರುವ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ. ಕೇವಲ 2ಎಮ್ಬಿ ಗಾತ್ರದ ‘ಭೀಮ್’ ಆ್ಯಪ್ ಹಣ ಪಾವತಿಸಲು ಬಳಸಲಾಗುವ ಅತೀ ಚಿಕ್ಕ ಅಪ್ಲಿಕೇಶನ್ ಆಗಿದೆ.
‘ಭೀಮ್’ ಆ್ಯಪ್ನ ಸಹಾಯದಿಂದ ಬ್ಯಾಂಕ್ ಖಾತೆಯಿಂದ ಮತ್ತು ಖಾತೆಗೆ ಹಣ ಠೇವಣಿ, ಸ್ವೀಕರಿಸುವುದು ಮತ್ತು ವಿನಂತಿಸುವುದು ತುಂಬ ಸುಲಭ ಹಾಗೂ ವೇಗವಾಗಿದೆ.
ಬಳಕೆದಾರರು ತಮ್ಮ ಬ್ಯಾಲನ್ಸ್ನ್ನು ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು ಮತ್ತು ಅನೇಕ ಬ್ಯಾಂಕ್ ಖಾತೆ ಹೊಂದಿರುವವರು ‘ಭೀಮ್’ ಆ್ಯಪ್ನಲ್ಲೇ ಖಾತೆಗಳನ್ನು ಬದಲಾಯಿಸಿ ವಿವರ ತಿಳಿದುಕೊಳ್ಳಬಹುದು.
ಐಎಫ್ಎಸ್ಸಿ ಮತ್ತು ಖಾತೆ ಸಂಖ್ಯೆಯ ಸಹಾಯದಿಂದ ಯುಪಿಐ ಹೊಂದಿಲ್ಲದ ಬ್ಯಾಂಕ್ಗಳಿಗೂ ಕೂಡ ಹಣ ಕಳಿಸಬಹುದು.
‘ಭೀಮ್’ ಆ್ಯಪ್ನ ಸಹಾಯದಿಂದ 35 ಬ್ಯಾಂಕ್ಗಳ ಬಳಕೆದಾರರು ತಮ್ಮ ಹಣಕಾಸು ವ್ಯವಹಾರ ಮಾಡಬಹುದು. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹೆಚ್ಚಿನ ಬ್ಯಾಂಕ್ಗಳನ್ನು ಸೇರಿಸಬಹುದು ಎಂದು ನಿರೀಕ್ಷಿಸಲಾಗಿದೆ. ‘ಭೀಮ್’ ಆ್ಯಪ್ನ್ನು ಆಂಡ್ರಾಯ್ಡ ವೇದಿಕೆಯಲ್ಲಿ ಎರಡು ಭಾಷೆಗಳಲ್ಲಿ ಲಭ್ಯವಿರುವಂತೆ ಬಿಡುಗಡೆ ಮಾಡಲಾಗಿತ್ತು ಆದರೆ ಸದ್ಯದಲ್ಲೇ ಇನ್ನೂ ಹತ್ತು ಭಾರತೀಯ ಭಾಷೆಗಳಲ್ಲಿ ಹಾಗೂ ಬೇರೆ ವೇದಿಕೆಗಳಲ್ಲೂ ಬಳಕೆದಾರರಿಗೆ ಲಭ್ಯವಾಗಲಿದೆ.
ತಮ್ಮ ಖಾತೆಗಳಿಗೆ ನೇರವಾಗಿ ಪಾವತಿ ಸ್ವೀಕರಿಸುವ ವರ್ತಕರಿಗೆ ‘ಭೀಮ್’ ಆ್ಯಪ್ ಒಂದು ದೊಡ್ಡ ವರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.