ನವದೆಹಲಿ: ಅನಿವಾಸಿ ಭಾರತೀಯರು ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರಿಗೆ ತಕ್ಷಣ ಸ್ಪಂದಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೊರೆ ಹೋಗಿದ್ದಾರೆ.
ನಿಮ್ಮ ಸಮಸ್ಯೆಗಳಿಗೆ ಬಗ್ಗೆ ಸಂಬಂಧಿಸಿದ ಭಾರತೀಯ ರಾಯಭಾರ ಕಚೇರಿ ಅಥವಾ ಅಧಿಕಾರಿಗಳಿಗೆ ಟ್ವೀಟ್ ಮಾಡಿ. ಹಾಗೂ ಟ್ವೀಟ್ನಲ್ಲಿ @sushmaswaraj ಅಂತಾ ಸೇರಿಸಿ. ತುರ್ತು ಪರಿಸ್ಥಿತಿಯಲ್ಲಿ ಇದು ನಿಮಗೆ ಸಹಕಾರಿಯಾಗಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
Please tweet your problem to the concerned Indian Embassy/authority and endorse the same to @sushmaswaraj. /1 Pl RT
— Sushma Swaraj (@SushmaSwaraj) January 9, 2017
ಇನ್ನೊಂದು ಟ್ವೀಟ್ನಲ್ಲಿ ’ ನಾನೇ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿ, ನಿಮ್ಮ ಟ್ವೀಟ್ಗೆ ವೈಯಕ್ತಿಕವಾಗಿ ಸ್ಪಂದಿಸುವೆ. ತುರ್ತುಪರಿಸ್ಥಿತಿ ಇದ್ದಲ್ಲಿ, # sos ಎಂದು ಸೇರಿಸಿ ಎಂದು ಅವರು ತಿಳಿಸಿದ್ದಾರೆ.
ಪಾರದರ್ಶಕತೆ ಹಾಗೂ ಬಹುದೊಡ್ಡಮಟ್ಟದಲ್ಲಿ ನಾಗರಿಕರ ಟ್ವೀಟ್ಗಳಿಗೆ ಸ್ಪಂದಿಸಲೆಂದೇ, ವಿದೇಶಾಂಗ ಖಾತೆ ಸಚಿವಾಲಯವು ಇತ್ತೀಚೆಗೆ ಟ್ವಿಟರ್ ಸೇವಾ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.