ನವದೆಹಲಿ : ಆದಾಯ ತೆರಿಗೆ ನಿಯಮಗಳು ತಿದ್ದುಪಡಿಗೊಂಡಿದ್ದು, ಬ್ಯಾಂಕ್ ಖಾತೆ ಹೊಂದಿದವರೆಲ್ಲರೂ ತೆರಿಗೆ ವಂಚನೆ ಹಾಗೂ ಕಪ್ಪುಹಣ ನಿಯಂತ್ರಣಕ್ಕಾಗಿ ತಮ್ಮ ಪಾನ್ ಖಾತೆ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕು, ಪಾನ್ ಸಂಖ್ಯೆ ಹೊಂದಿಲ್ಲದವರು ಫಾರ್ಮ ನಂ. 60 ಸಲ್ಲಿಸಬೇಕು (ಫೆ.28,2017 ರೊಳಗೆ ) ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxes (CBDT)) ಭಾನುವಾರ ಅಧಿಸೂಚನೆ ಹೊರಡಿಸಿದೆ.
ನೋಟು ಅಮಾನ್ಯೀಕರಣದ ನಂತರದ ಸನ್ನಿವೇಶದಲ್ಲಿ, ತೆರಿಗೆ ವಂಚನೆ ತಡೆಯುವಲ್ಲಿ ಈ ನಿಯಮವು ಬಿಗಿಯನ್ನು ತರಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಎಲ್ಲ ಬ್ಯಾಂಕ್ಗಳಿಗೂ ಕೇಂದ್ರ ಸರ್ಕಾರವೂ ಸೂಚಿಸಿದೆ.
ಆದರೆ, ಶೂನ್ಯ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆ ಅಥವಾ ಜನಧನ್ ಖಾತೆದಾರರಿಗೆ ಈ ತಿದ್ದುಪಡಿ ನಿಯಮವು ಅನ್ವಯಿಸುವುದಿಲ್ಲ.
ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಏಪ್ರಿಲ್-1 2016 ರಿಂದ ನ. 8 2016 ರವರೆಗೆ ಜಮೆಯಾದ ಒಟ್ಟು ನಗದು ಹಾಗೂ ನ. 9 ರಿಂದ ಡಿ. 30 ರ ಅವಧಿಯಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಜಮೆಯಾದ ಖಾತೆಗಳ ಕುರಿತು ಕಡ್ಡಾಯವಾಗಿ ಮಾಹಿತಿ ಸಲ್ಲಿಸುವಂತೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.