ನವದೆಹಲಿ : ಪೆಟ್ರೋಲ್ ಬಂಕ್ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ಅವಧಿಯನ್ನು ಜನವರಿ 13 ರ ವರೆಗೆ ವಿಸ್ತರಿಸಲಾಗಿದೆ.
ಪೆಟ್ರೋಲ್ ಬಂಕ್ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸಿದರೆ ಶೇ. 1 ರಷ್ಟು ವಹಿವಾಟು ಶುಲ್ಕವನ್ನು ಬಂಕ್ ಮಾಲೀಕರ ಮೇಲೆ ಹೇರಲಾಗುವುದು ಎಂದು ಬ್ಯಾಂಕ್ಗಳು ನಿರ್ಧರಿಸಿದ್ದವು. ಆದರೆ ಈ ಶುಲ್ಕ ಹೇರಿಕೆಯನ್ನು ವಿರೋಧಿಸಿ ಸೋಮವಾರದಿಂದ ಪೆಟ್ರೋಲ್ ಬಂಕ್ಗಳಲ್ಲಿ ಕಾರ್ಡ್ ಸ್ವೀಕಾರವನ್ನು ಸ್ಥಗಿತಗೊಳಿಸುವುದಾಗಿ ಬಂಕ್ ಮಾಲೀಕರ ಸಂಘ ನಿರ್ಧರಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಶೇ. 1 ರಷ್ಟು ವಹಿವಾಟು ಶುಲ್ಕವನ್ನು ಪ್ರಸ್ತುತ ಹೇರದಿರಲು ನಿರ್ಧರಿಸಿದ್ದು, ಇದೀಗ ಪೆಟ್ರೋಲ್ ಬಂಕ್ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ಅವಧಿಯನ್ನು ಜನವರಿ 13 ರ ವರೆಗೆ ವಿಸ್ತರಿಸಲಾಗಿದೆ.
ಭಾನುವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ‘ಈ ವಿಷಯವನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಜನವರಿ 13 ರ ವರೆಗೆ ಶುಲ್ಕ ಹೇರುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಭರವಸೆಯ ಹಿನ್ನಲೆಯಲ್ಲಿ ಕಾರ್ಡ್ ಸ್ವೀಕಾರವನ್ನು ಮುಂದುವರಿಸಿದ್ದೇವೆ. ಸರ್ಕಾರದ ಮುಂದಿನ ನಿಲುವನ್ನು ಆಧರಿಸಿ ನಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳು ಹಾಗೂ ಬೆಂಗಳೂರು ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಬಿ. ಆರ್. ರವೀಂದ್ರನಾಥ್ ಹೇಳಿದ್ದಾರೆ.
ಐಸಿಐಸಿಐ, ಹೆಚ್ಡಿಎಫ್ಸಿ ಹಾಗೂ ಆಕ್ಸಿಸ್ ಬ್ಯಾಂಕ್ಗಳು ಪೆಟ್ರೋಲಿಯಂ ವಿತರಕರಿಗೆ ಕಾರ್ಡ್ಗೆ ಶೇ. 1 ರಷ್ಟು ವಹಿವಾಟು ಶುಲ್ಕವನ್ನು ಭರಿಸುವಂತೆ ನೋಟಿಸ್ ನೀಡಿದ್ದವು. ಹೀಗಾಗಿ ಪೆಟ್ರೋಲಿಯಂ ವಿತರಕರು ಹಾಗೂ ಬಂಕ್ ಮಾಲೀಕರು ಇಂದಿನಿಂದ ಕಾರ್ಡ್ ಸ್ವೀಕರಿಸದಿರಲು ನಿರ್ಧರಿಸಿದ್ದರು. ಆದರೆ ಕೇಂದ್ರ ಸರ್ಕಾರ ವಹಿವಾಟು ಶುಲ್ಕವನ್ನು ಸದ್ಯದ ಮಟ್ಟಿಗೆ ಮುಂದೂಡಿ ಎಂದು ಬ್ಯಾಂಕ್ಗಳಿಗೆ ಹೇಳಿದ್ದು, ಜನವರಿ 13 ರವರೆಗೆ ಎಲ್ಲಾ ಬಂಕ್ಗಳಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸ್ವೀಕರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.