ನ್ಯೂಯಾರ್ಕ್: ಅಮೇರಿಕಾದಲ್ಲಿ ಹದಿಹರೆಯದವರಿಗೆ ಶಿಕ್ಷಣ ಅವಕಾಶಗಳನ್ನು ಕಲ್ಪಿಸಲು ಬಯಸುವ ವಿದ್ಯಾರ್ಥಿ ಸಲಹಾ ಮಂಡಳಿಯ ಉದ್ಘಾಟನಾ ಶಿಕ್ಷಣ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಭಾರತೀಯ ಮೂಲದ 16 ವರ್ಷದ ಶ್ವೇತಾ ಪ್ರಭಾಕರನ್ ಅವರನ್ನು ಮಿಚೆಲ್ ಒಬಾಮಾ ಅವರು ಆಯ್ಕೆ ಮಾಡಿದ್ದಾರೆ.
೧೯೯೮ರಲ್ಲಿ ಶ್ವೇತಾ ಅವರ ಪೋಷಕರು ತಮಿಳುನಾಡಿನ ತಿರುನಲ್ವೇಲಿಯಿಂದ ಅಮೇರಿಕಕ್ಕೆ ವಲಸೆ ಹೋಗಿದ್ದು, ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಶಿಕ್ಷಣ ನೀಡಲು ತನ್ನ ಪ್ರಯತ್ನಗಳನ್ನು ಗುರುತಿಸಿ ಶ್ವೇತಾ ಅವರನ್ನು ‘ಬೆಟರ್ ಮೇಕ್ ರೂಮ್’ ಅಭಿಯಾನದ ವಿದ್ಯಾರ್ಥಿ ಸಲಹಾ ಮಂಡಳಿಗೆ ಆಯ್ಕೆ ಮಾಡಲಾಗಿದೆ.
ಮಂಡಳಿಯ ಸದಸ್ಯರು ಮಿಚೆಲ್ ಒಬಾಮಾ ಅವರ ವರ್ಷದ ಶಾಲಾ ಸಲಹೆಗಾರ/ಸಲಹೆಗಾರ್ತಿ ಸಮಾರಂಭದಲ್ಲಿ ಭಾಗವಹಿಸಲು ಶ್ವೇತಭವನಕ್ಕೆ ಶನಿವಾರ ತೆರಳಲಿದ್ದಾರೆ.
ವರ್ಜಿನಿಯಾದ ಥಾಮಸ್ ಜೆಫರ್ಸನ್ ವಿಜ್ಞಾನ ಮತ್ತು ತಂತ್ರಜ್ಞಾನ ಹೈಸ್ಕೂಲ್ನ ಹಿರಿಯ ವಿದ್ಯಾರ್ಥಿನಿ ಶ್ವೇತಾ, ಇಂಜಿನಿಯರ್, ವಿಜ್ಞಾನಿ, ಉದ್ಯಮಿ ಆಗಲು ಬಯಸುವ ಯುವ ಜನಾಂಗದ ಸಬಲೀಕರಣದಲ್ಲಿ ಕಾರ್ಯ ನಿರ್ವಹಿಸುವ ‘Everybody Code Now!’ ಲಾಭರಹಿತ ಸಂಸ್ಥೆಯ ಸ್ಥಾಪಕಿ ಹಾಗೂ ಸಿಇಒ ಆಗಿದ್ದಾರೆ.
ಬೆಟರ್ ಮೇಕ್ ರೂಮ್’ನ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಶ್ವೇತಭವನ ಆಯ್ಕೆ ಮಾಡಿದ 17 ವಿದ್ಯಾರ್ಥಿಗಳಲ್ಲಿ ಶ್ವೇತಾ ಒಬ್ಬರಾಗಿದ್ದಾರೆ. ಉದ್ಘಾಟನಾ ಮಂಡಳಿಯ ಸದಸ್ಯರಲ್ಲಿ 12 ಹೈಸ್ಕೂಲ್ ಮತ್ತು 5 ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.