ನವದೆಹಲಿ : ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಶೇ. 60% ಹಿಂಸಾಚಾರ ಕಡಿಮೆಯಾಗಿದೆ ಮತ್ತು ಹವಾಲಾ ಚಟುವಟಿಕೆಯು ಶೇ. 50% ರಷ್ಟು ಇಳಿಕೆ ಕಂಡಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ನವೆಂಬರ್ 8 ರಂದು ಕೇಂದ್ರ ಸರ್ಕಾರ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರ ಪರಿಣಾಮ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಹಿಂಸಾಚಾರದ ಪ್ರಮಾಣ ಶೇ. 60% ರಷ್ಟು ಇಳಿಕೆ ಕಂಡಿದೆ. ಇಷ್ಟೇ ಅಲ್ಲದೆ ಹವಾಲಾ ಚಟುವಟಿಕೆಗಳು ಕೂಡಾ ಶೇ. 50% ಇಳಿಕೆ ಕಂಡು ಭ್ರಷ್ಟಾಚಾರ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಭಾರೀ ಇಳಿಕೆ ಕಂಡಿದೆ.
ಪಾಕಿಸ್ಥಾನದಲ್ಲಿ ರೂ. 500 ಮತ್ತು 1000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಹಾಗೂ ಹವಾಲಾ ಜಾಲ ಯಶಸ್ವಿಯಾಗಿ ನಡೆಯಲು ಹೆಚ್ಚು ನೆರವಾಗುತ್ತಿತ್ತು. ಇದೀಗ ನೋಟು ನಿಷೇಧದ ನಂತರ ಹಿಂಸಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ, ರಿಯಲ್ ಎಸ್ಟೇಟ್ ಇವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಣಿವೆ ರಾಜ್ಯಗಳಲ್ಲಿ ಕಲ್ಲು ತೂರಾಟ ಮಾಡುವವರಿಗೆ, ಭಯೋತ್ಪಾದಕರಿಗೆ ಹಣ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದರ ಪರಿಣಾಮ ಶೇ. 60% ಹಿಂಸಾಚಾರ ಮತ್ತು ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿವೆ. ಹವಾಲಾ ಚಟುವಟಿಕೆಗಳೂ ಕೂಡಾ ಕಡಿಮೆಯಾಗಿ ಶೇ. 50% ಹವಾಲಾ ಜಾಲ ಕೂಡಾ ನೆಲಕಚ್ಚಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ಭಾರೀ ಪರಿಣಾಮ ಬೀರಿದ್ದು ದರ ಕೂಡಾ ಕಡಿಮೆ ಆಗಿತ್ತು. ಈಶಾನ್ಯ ಭಾಗದಲ್ಲಿ ನೋಟು ನಿಷೇಧದ ನಂತರ ಬಂಡವಾಳ ಕೊರತೆಯಿಂದಾಗಿ ಗಡಿಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಖರೀದಿಗೂ ಪೆಟ್ಟು ಬಿದ್ದಿದೆ. ಮಾವೋವಾದಿಗಳು ಹಾಗೂ ಅವರ ಬೆಂಬಲಿಗರಿಂದ ಈವರೆಗೆ ಸುಮಾರು 90 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.