ಕಠ್ಮಂಡು: ನೇಪಾಳದಲ್ಲಿ ಹಣಕಾಸು ಬಿಕ್ಕಟ್ಟು ಹಾಗೂ 100 ರೂ. ಮುಖಬೆಲೆಯ ನೋಟುಗಳ ಸಮಸ್ಯೆಯನ್ನು ನಿವಾರಿಸಲು ಆರ್ಬಿಐ 100 ರೂ. ಮುಖಬೆಲೆಯ 1 ಬಿಲಿಯನ್ ರೂ.ಗಳನ್ನು ನೇಪಾಳ ರಾಷ್ಟ್ರ ಬ್ಯಾಂಕ್ (ಎನ್ಆರ್ಬಿ)ಗೆ ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಭಾರತ ಸರ್ಕಾರ ನವೆಂಬರ್ 8ರಂದು 500 ರೂ. ಮತ್ತು 1000 ರೂ. ನೋಟುಗಳ ಅನಾಣ್ಯೀಕರಣ ಕ್ರಮದ ಕಾರಣ ಈ ಕಾರ್ಯ ವಿಳಂಬಗೊಂಡಿತ್ತು.
ಈ ಬಗ್ಗೆ ಆರ್ಬಿಐ 100 ರೂ. ಮುಖಬೆಲೆಯ 1 ಬಿಲಿಯನ್ ಭಾರತೀಯ ನೋಟುಗಳನ್ನು ಒದಗಿಸುವುದಾಗಿ ಎನ್ಆರ್ಬಿಗೆ ಪತ್ರದ ಮೂಲಕ ತಿಳಿಸಿದೆ.
ಪ್ರಸ್ತುತ ಎನ್ಆರ್ಬಿ ಕೂಡ ಪೌರತ್ವ ಗುರುತಿನ ಆಧಾರದ ಮೇಲೆ ರೂ. 2000 ವರೆಗಿನ ವಿನಿಮಯ ಸೌಲಭ್ಯವನ್ನು ಒದಗಿಸುತ್ತಿದೆ. ಅಲ್ಲದೇ ಎನ್ಆರ್ಬಿ ಬ್ಯಾಂಕ್ ಭಾರತಕ್ಕೆ ಪ್ರಯಾಣಿಸಲಿರುವ ಪ್ರಯಾಣಿಕರಿಗೆ ವಿಮಾನ ಅಥವಾ ರೈಲು ಟಿಕೆಟ್ಗಳ ಪ್ರತಿಯನ್ನು ಒದಗಿಸಿದಲ್ಲಿ ರೂ. 10,000 ವರೆಗೆ ನೀಡುತ್ತಿದೆ.
ವೈದ್ಯಕೀಯ ಚಿಕಿತ್ಸೆಗೆ ಭಾರತಕ್ಕೆ ತೆರಳುವವರಿಗೆ 25 ಸಾವಿರದ ವರೆಗೆ ಭಾರತೀಯ ಕರೆನ್ಸಿಗಳನ್ನು ಎನ್ಆರ್ಐ ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.