ನವದೆಹಲಿ : ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ನಿಷೇಧಿಸುವಂತೆ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಯಲ್ಲಿ ಮನವಿ ಸಲ್ಲಿಸಲು ಚಿಂತಿಸಿದೆ.
ಪಾಕಿಸ್ಥಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ನಿಷೇಧಿಸುವ ವಿಚಾರದಲ್ಲಿ ಚೀನಾ ಪ್ರತಿ ಬಾರಿಯೂ ಅಡಚಣೆಯನ್ನು ತರುತ್ತಿತ್ತು. ಆದರೆ ಮತ್ತೊಮ್ಮೆ ಇದೀಗ ವಿಶ್ವಸಂಸ್ಥೆಗೆ ಈ ಕುರಿತು ಮನವಿ ಸಲ್ಲಿಸಲು ಭಾರತ ಮುಂದಾಗಿದೆ ಎನ್ನಲಾಗಿದೆ.
ಮಸೂದ್ ಅಜರ್ಗೆ ನಿಷೇಧಿಸಲು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲು ಎಲ್ಲಾ ಆಯ್ಕೆಗಳು ಹಾಗೂ ಭಾರತದ ಈ ನಿಲುವನ್ನು ಬೆಂಬಲಿಸುವವರೊಂದಿಗೆ ಚರ್ಚಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಕಳೆದ ವಾರವಷ್ಟೇ ಚೀನಾ ಭಾರತದ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯುಂಟಾಗುವಂತೆ ಮಾಡಿತ್ತು. ಮಸೂದ್ ಅಜರ್ಗೆ ನಿಷೇಧಿಸುವ ವಿಚಾರದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತ ನಡೆಸುತ್ತಿರುವ ಮೂರು ಬಾರಿಯ ಪ್ರಯತ್ನಗಳನ್ನೂ ಚೀನಾ ವಿಫಲಗೊಳಿಸಿತ್ತು. ಆದರೆ ಭಾರತ ಮತ್ತೊಮ್ಮೆ ಈ ಕುರಿತು ಮನವಿ ಸಲ್ಲಿಸಲು ಮುಂದಾಗಿದ್ದು, ಮಸೂದ್ ಅಜರ್ಗೆ ನಿಷೇಧಿಸುವ ಮನವಿಯನ್ನು ವಿಶ್ವಸಂಸ್ಥೆಗೆ ಯಾವಾಗ ನೀಡಲಾಗುವುದು ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕು ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.