ನವದೆಹಲಿ: ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಿಗೆ ನೋಟು ಸರಬರಾಜು ಹೆಚ್ಚಿಸುವ ಉದ್ದೇಶದಿಂದ ಈ ಭಾಗಗಳಲ್ಲಿ ಹೊಸ ನೋಟುಗಳ ಪೂರೈಕೆ ಹೆಚ್ಚಿಸುವಂತೆ ಆರ್ಬಿಐ ತನ್ನ ನಗದು ವಿತರಕ ಬ್ಯಾಂಕ್ಗಳಿಗೆ ಸೂಚಿಸಿದೆ.
ಆರ್ಬಿಐ ಪ್ರದೇಶಿಕ ಗ್ರಾಮೀಣ ಬ್ಯಾಂಕ್ಗಳು, ಜಿಲ್ಲಾ ಕೋ-ಅಪರೇಟಿವ್ ಕೇಂದ್ರ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್ಗಳು ಶೇ.40 ಹೊಸ ನೋಟುಗಳನ್ನು ಹೊಂದುವಂತೆ ಪೂರೈಕೆ ಮಿತಿಯನ್ನು ಹೆಚ್ಚಿಸಲು ನಗದು ವಿತರಣೆ ಮಾಡುವ ಪ್ರಮುಖ ಬ್ಯಾಣಕ್ಗಳಿಗೆ ತಿಳಿಸಿದೆ.
ಬ್ಯಾಂಕ್ಗಳು ಪ್ರತಿ ಶುಕ್ರವಾರ ಸಾಪ್ತಾಹಿಕ ವಹಿವಾಟುಗಳ ವರದಿ ಸಲ್ಲಿಸುವಂತೆಯೂ ಆರ್ಬಿಐ ಕೇಳಿಕೊಂಡಿದೆ.
ಗ್ರಾಮೀಣ ಪ್ರದೇಶದ ಬ್ಯಾಂಕ್ಗಳಿಗೆ ಹಾಗೂ ಎಟಿಎಂಗಳಿಗೆ ರೂ.500 ಮತ್ತು ರೂ.100ರ ನೋಟುಗಳನ್ನೇ ವಿತರಿಸಬೇಕು. ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ವಿತರಿಸಬಾರದು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.