ಬೆಂಗಳೂರು: ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ನಿರ್ವಾಹಕ ಕಂಪೆನಿ ಐಡಿಯಾ ಸೆಲ್ಯೂಲರ್ ಕರ್ನಾಟಕದಾದ್ಯಂತ 30 ಜಿಲ್ಲೆಗಳ 1,579 ಗ್ರಾಮಗಳಿಗೆ ವಿಸ್ತರಿಸಿದೆ.
ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ತುಮಕೂರು, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ ಶೇ. 37ರಷ್ಟು ಜನಸಂಖ್ಯೆ ಐಡಿಯಾ 4G ಬ್ರಾಡ್ಬ್ಯಾಂಡ್ ಹೊಂದಿವೆ.
ಕಂಪೆನಿಯು ಆಪ್ಟಿಕಲ್ ಫೈಬರ್ ಕೇಬಲ್ ಅಳವವಡಿಸಲು ಹೂಡಿಕೆ ಮಾಡಿದ್ದು, ವೈರ್ಲೆಸ್ ಬ್ರಾಡ್ಬ್ಯಾಂಡ್ ಸ್ಥಾಪಿಸಲು ಹೂಡಿಕೆ ಮಾಡಲು ಮುಂದಾಗಿದೆ. ಮಾರ್ಚ್ 2017ರ ಒಳಗೆ ಕರ್ನಾಟಕದಾದ್ಯಂತ ತನ್ನ ನೆಟ್ವರ್ಕ್ ವಿಸ್ತರಿಸಲು ಕಂಪೆನಿ ಚಿಂತನೆ ನಡೆಸಿದೆ.
ಐಡಿಯಾ ಹಲವು ವಾಯ್ಸ್ ಮತ್ತು ಡಾಟಾ ಆಫರ್ಗಳನ್ನು ಪರಿಚಯಿಸಿದೆ. 4G ಮೊಬೈಲ್ ಹ್ಯಾಂಡ್ಸೆಟ್ ಹೊಂದಿರುವ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯ ರೂ.245ರ 10 ಜಿಬಿ ಡಾಟಾ ಪಡೆಯಲಿದ್ದಾರೆ. ಈ ಆಫರ್ನ್ನು ಒಟ್ಟು 3 ಬಾರಿ ಪಡೆಯಬಹುದಾಗಿದೆ.
ಐಡಿಯಾ ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿಯ ರೂ.499ರ 10 ಜಿಬಿ ಡಾಟಾ ಆಫರ್ನ್ನು ಕೂಡ ಆರಂಭಿಸಿದೆ. ಇದನ್ನು ಗ್ರಾಹಕರು ಅನಿಯಮಿತವಾಗಿ ಪಡೆಯಬಹುದಾಗಿದೆ. 28 ದಿನಗಳ ಐಡಿಯಾ-ಟು- ಐಡಿಯಾ ಸ್ಥಳೀಯ ಕರೆಗಳಿಗೆ 10 ಪೈ ಪ್ರತಿ ಕರೆಯಂತೆ 23 ರೂ. ಆಫರ್ನ್ನೂ ಪರಿಚಯಿಸಿದೆ.
ಕರ್ನಾಟಕದಾದ್ಯಂತ ಗ್ರಾಹಕರಿಗೆ ವಿವಿಧ ವಾಯ್ಸ್ ಮತ್ತು ಡಾಟಾ ಆಫರ್ಗಳನ್ನೂ ಬಿಡುಗಡೆ ಮಾಡಿದೆ. ಸುಮರು 94 ಲಕ್ಷ ಗ್ರಾಹಕರಿಗೆ ಮ್ಯೂಸಿಕ್, ಗೇಮ್ಸ್, ಟಿವಿ, ನ್ಯೂಸ್, ಮೂವೀಸ್ ಮುಂತಾದ ಡಿಜಿಟಲ್ ಕಂಟೆಂಟ್ ಮುಂದುವರೆಸಲು ಮುಂದಾಗಿದೆ ಎಂದು ಕರ್ನಾಟಕ ಐಡಿಯಾ ಸೆಲ್ಯೂಲರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವ ಗಣಪತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.