ನವದೆಹಲಿ: ಭಾರತದ ಸಣ್ಣ ಹಾಗೂ ಮಧ್ಯಮ ಉದ್ಯಮಗಳು (ಎಸ್ಎಂಬಿ)ಗಳಿಗೆ ಮೈ ಬಿಸಿನೆಸ್ ವೆಬ್ ಅಡಿಯಲ್ಲಿ ಪ್ರೈಮರ್ ಆ್ಯಪ್ ಸೇರಿದಂತೆ ಹಲವಾರು ತರಬೇತಿ ಉಪಕ್ರಮಗಳನ್ನು ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ಅನಾವರಣಗೊಳಿಸಿದ್ದಾರೆ.
ಅವುಗಳಲ್ಲಿ 51 ಮಿಲಿಯನ್ ಎಸ್ಎಂಬಿ ಮಾರುಕಟ್ಟೆಗಳಿಗೆ ಮೈ ಬಿಸಿನೆಸ್ ವೆಬ್ ಮತ್ತು ಡಿಜಿಟಲ್ ಅನ್ಲಾಕ್ ಟ್ರೈನಿಂಗ್ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, ಕಂಪೆನಿಯು ಭಾರತದ ಉತ್ಪನ್ನಗಳನ್ನು ಜಾಗತಿಕವಾಗಿ ವಿಸ್ತರಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಭಾರತದ ಜೊತೆಗೆ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಿಗೆ ಸಹಕರಿಸಿದಂತಾಗುತ್ತದೆ ಎಂದು ಪಿಚೈ ಹೇಳಿದ್ದಾರೆ.
ಗೂಗಲ್ನ ಮೈ ಬಿಸಿನೆಸ್ ವೆಬ್ ಸಣ್ಣ ಉದ್ಯಮಗಳು ತಮ್ಮ ಮೊಬೈಲ್ ಸಾಧನದಿಂದ ಮೂಲಕ ತಮ್ಮದೇ ವೆಬ್ಸೈಟ್ ಸ್ಥಾಪಿಸಲು ಸಹಾಯಕವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾಹಿತಿ ಮತ್ತು ತಂತ್ರಜ್ಞಾನದ ಲಾಭ ಪಡೆಯುವಲ್ಲಿ ನಾನು ಶ್ರಮಿಸುತ್ತೇವೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಇಂಟರ್ನೆಟ್ ಮತ್ತು ಡಿಜಿಟಲ್ ತಂತ್ರಜ್ಞಾನ ಭಾರತದ ಆರ್ಥಿಕತೆಯ ಬೆಳವಣಿಗೆಯ ಇಂಜಿನ್ ಆಗಿವೆ. ಇಂದು ಪ್ರತಿಯೊಬ್ಬರೂ ಉದ್ಯಮಿ, ಡೆವೆಲಪರ್, ಸೃಷ್ಟಿಕರ್ತ ಆಗಲು ಸಾಧ್ಯವಿದೆ. ಆದರೆ ಅವರು ಡಿಜಿಟಲ್ ಆಗಲು ಅಗತ್ಯ ಉಪಕರಣಗಳು ಮತ್ತು ಕೌಶಲ್ಯವನ್ನು ಹೊಂದುವುದು ಅಗತ್ಯವೆನಿಸಿದೆ ಎಂದು ಅವರು ಹೇಳಿದ್ದಾರೆ.
ಕಂಪೆನಿಯು ಉದ್ಯಮ ಸಂಸ್ಥೆ ಎಫ್ಸಿಸಿಐ ಮತ್ತು ಇಂಡಿಯನ್ ಸ್ಕೂಲ್ ಆಫ್ ಬಿನಿನೆಸ್ ಸಹಯೋಗದೊಂದಿಗೆ ಡಿಜಿಟಲ್ ಅನ್ಲಾಕ್, ಒಂದು ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸಿದೆ. ಇದು ಆನ್ಲೈನ್, ಆಫ್ಲೈನ್ ಮತ್ತು ಮೊಬೈಲ್ ಮೂಲಕ ಲಭ್ಯವಾಗಲಿದ್ದು, ಪ್ರೈಮರ್ ಆ್ಯಪ್ ರೂಪದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಡಿಜಿಟಲ್ ಅನ್ಲಾಕ್ ಆಪ್ನ್ನು ಡಿಜಿಟಲ್ ಮಾರುಕಟ್ಟೆ ಕೌಶಲ್ಯದ ಶಿಕ್ಷಣ ನೀಡಲು, ಸಂವಾದ ನಡೆಸಲು ಬಿಡುಗಡೆ ಮಾಡಲಾಗಿದ್ದು, ಇದು ಆಂಗ್ಲ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪೆನಿಯು ಮರಾಠಿ, ತಮಿಳು, ತೆಲುಗು ಭಾಷೆಗಳನ್ನು ಅಳವಡಿಸಲು ಮುಂದಾಗಿದೆ ಎಂದು ಪಿಚೈ ಹೇಳಿದ್ದಾರೆ.
ಎಸ್ಎಂಬಿಗಳು ಆರಂಭದಿಂದಲೂ ನಮ್ಮ ವೇದಿಕೆಯ ಪ್ರಮುಖ ಬಳಕೆದಾರರಾಗಿದ್ದಾರೆ ಎಂದು ಗೂಗಲ್ ಇಂಡಡಿಯಾ ಮತ್ತು ಸೌತ್-ಈಸ್ಟ್ ಏಷ್ಯಾ ಉಪಾಧ್ಯಕ್ಷ ರಾಜನ್ ಆನಂದನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.