ನವದೆಹಲಿ: ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.
ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಚುನಾವಣೆಯ ದಿನಂಕಗಳನ್ನು ಘೋಷಿಸಿದ್ದು, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶಗಳಲ್ಲಿ ಫೆಬರವರಿ 4ರಿಂದ ಮಾರ್ಚ್ 9ರ ನಡುವೆ ಚುನಾವಣೆ ನಡೆಯಲಿವೆ ಎಂದು ನಸೀಮ್ ಜೈದಿ ಹೇಳಿದ್ದಾರೆ.
ಗೋವಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಫೆಬ್ರವರಿ 4ರಂದು ಮತದಾನ ನಡೆದರೆ, ಉತ್ತರಾಖಂಡ್ನಲ್ಲಿ ಫೆಬ್ರವರಿ 15ರಂದು ಮತದಾನ ನಡೆಯಲಿದೆ.
ಮಣೀಪುರದಲ್ಲಿ ಮಾರ್ಚ್ 4 ಹಾಗೂ 8ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಉತ್ತರ ಪ್ರದೇಶದಲ್ಲಿ ಫೆಬ್ರವರಿ 11, 15, 19, 23, 27, ಮಾರ್ಚ್ 4 ಮತ್ತು ಮಾರ್ಚ್ 8ರಂದು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಎಲ್ಲ 5 ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಮಾರ್ಚ್ 11ರಂದು ಪ್ರಕಟಿಸಲಾಗುವುದು ಎಂದು ಜೈದಿ ಹೇಳಿದ್ದಾರೆ.
ಇದು 2014ರ ಲೋಕಸಭಾ ಚುನಾವಣೆಯ ನಂತರದ ಅತಿ ದೊಡ್ಡ ಚುನಾವಣೆ ಆಗಲಿದೆ ಎನ್ನಲಾಗಿದೆ. ಒಟ್ಟು 690 ಸ್ಥಾನಗಳಿದ್ದು, ಇವುಗಳಲ್ಲಿ 133 ಸ್ಥಾನಗಳನ್ನು ಪರಿಶಿಷ್ಟ ಜಾತಿ ಹಾಗೂ 23 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ.
ಉತ್ತರ ಪ್ರದೇಶದಲ್ಲಿ ಅತ್ಯಧಿಕ 403, ಸ್ಥಾನಗಳಿದ್ದರೆ, ಪಂಜಾಬ್ನಲ್ಲಿ 117, ಗೋವಾದಲ್ಲಿ 40, ಮಣಿಪುರದಲ್ಲಿ 60 ಹಾಗೂ ಉತ್ತರಾಖಂಡ್ನಲ್ಲಿ 70 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಕಾರ ಪಂಜಾಬ್, ಉತ್ತರಾಖಂಡ್ಗಳಲ್ಲಿ ಅಭ್ಯರ್ಥಿಗಳು 28 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರಚಾರಕ್ಕಾಗಿ ವ್ಯಯಿಸುವಂತಿಲ್ಲ. ಅದೇ ರೀತಿ ಗೋವಾ ಮತ್ತು ಮಣಿಪುರ್ಗಳಲ್ಲಿ ಅಭ್ಯರ್ಥಿಗಳು 20 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸುವಂತಿಲ್ಲ ಎಂದು ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.