ನವದೆಹಲಿ: ಸಂಸತ್ನ ಕ್ಯಾಂಟೀನ್ಗಳಲ್ಲಿ ಇನ್ನು ಮುಂದೆ ಆಹಾರ ಪದಾರ್ಥಗಳು ರಿಯಾಯಿತಿ ದರಗಳಲ್ಲಿ ನೀಡಲಾಗುವುದಿಲ್ಲ.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಜನವರಿ ೧ರಿಂದ ಯಾವುದೇ ‘ಲಾಭ ಮತ್ತು ನಷ್ಟ’ ರಹಿತ ಆಧಾರದಲ್ಲಿ ಸಂಸತ್ನ ಕ್ಯಾಂಟೀನ್ ಕಾರ್ಯ ನಿರ್ವಹಿಸುವಂತೆ ನಿರ್ಧರಿಸಿದ್ದಾರೆ ಎಂದು ಲೋಕಸಭಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಮಾರುಕಟ್ಟೆಗಳಲ್ಲಿ ಹಣದುಬ್ಬರ ಇದ್ದಾಗ ಸಂಸತ್ ಕ್ಯಾಂಟೀನ್ನಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಒದಗಿಸುವ ಬಗ್ಗೆ ಆಗಾಗ ವಿವಾದಗಳು ಉಂಟಾಗಿದ್ದು, ಕ್ಯಾಂಟೀನ್ನಲ್ಲಿ ದೊರೆಯುವ ಆಹಾರಗಳ ದರಗಳಲ್ಲಿ ಏರಿಕೆ ಮಾಡಲಾಗಿದೆ.
ಸಂಸತ್ನ ಕ್ಯಾಂಟೀನ್ನಲ್ಲಿ ನೀಡಲಾಗುತ್ತಿರುವ ಸಬ್ಸಿಡಿ ದರಗಳ ಬಗ್ಗೆ ಪರಿಶೀಲಿಸುವಂತೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ನ ಆಹಾರ ಸಮಿತಿಗೆ ಸೂಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಾಗಿದೆ.
ಅದರಂತೆ ಈ ಹಿಂದಿನ ರೂ.18ರ ವೆಜ್ ಥಾಲಿ ಊಟದ ದರವನ್ನು ರೂ. 30 ಹಾಗೂ ರೂ.33ರ ನಾನ್-ವೆಜ್ ಥಾಲಿಯ ದರವನ್ನು ರೂ.60ಕ್ಕೆ ಏರಿಸಲಾಗಿದೆ.
ಕಳೆದ ೫ ವರ್ಷಗಲ್ಲಿ ಸಂಸತ್ ಕ್ಯಾಂಟೀನ್ನಲ್ಲಿ 60.7 ಕೋಟಿ ರೂ. ಸಬ್ಸಿಡಿ ಸೌಲಭ್ಯ ನೀಡಲಾಗಿದೆ ಎಂದು ಆರ್ಟಿಐ ವರದಿ ಬಹಿರಂಗಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.