ನವದೆಹಲಿ: ರಕ್ಷಣಾ ಸಚಿವಾಲಯ ಕೈಗೊಂಡಿರುವ ಕೆಲವು ಪ್ರಮುಖ ಉಪಕ್ರಮಗಳ ಬಗ್ಗೆ ತಿಳಿಸಿದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಒನ್ ರ್ಯಾಂಕ್- ಒನ್ ಪೆನ್ಷನ್ (ಒಆರ್ಒಪಿ) ಅಡಿಯಲ್ಲಿ ಅರ್ಹ ಬೇಡಿಕೆಗಳನ್ನು ಜನವರಿ, 2017ರ ಒಳಗಾಗಿ ಪರಿಹತಿಸುವುದಾಗಿ ಭರವಸೆ ನೀಡಿದ್ದಾರೆ.
ರಕ್ಷಣಾ ಸಚಿವಾಲಯದ ಸ್ವಚ್ಛತಾ ಪಖ್ವಾಡ ಕಾರ್ಯಕ್ರಮದಲ್ಲಿ ಭಾಗವಿಸಿ ಮಾತನಾಡುತ್ತಿದ್ದ ಪರಿಕ್ಕರ್ ಅವರು, ಈಗಾಗಲೇ ೧೩,೦೦೦ ಪ್ರಕರಣಗಳನ್ನು ಪಿಂಚಣಿ ವಿತರಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ರಕ್ಷಣಾ ಸಚಿವಾಲಯ ಕಳೆದ ಎರಡೂವರೆ ವರ್ಷಗಳಲ್ಲಿ ಸಚಿವಾಲಯ ಮಾಜಿ ಸೈನಿಕರ ಸೆಲ್ನ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದ್ದಾರೆ.
ಒಆರ್ಒಪಿ ಒಂದು ಪ್ರಮುಖ ವಿಷಯವಾಗಿದೆ. ಈವರೆಗೆ ಪ್ರತಿ ಜನವರಿ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಮಾಜಿ ಸೈನಿಕರ ಪಿಂಚಣಿಯನ್ನು ಪಾಯಸಲಾಗಿದೆ. ಇದು ಕನೆಯ ಹಂತ ತಲುಪಿದ್ದು, ಜನವರಿ, 2017ರ ಅಂತ್ಯದೊಳಗೆ ಶೇ.99ರಷ್ಟು ಒಆರ್ಒಪಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಪರಿಕ್ಕರ್ ತಿಳಿಸಿದ್ದಾರೆ.
ನೈಕ್ ಸುಬೇದಾರ್ ರ್ಯಾಂಕ್ನ ಪಿಂಚಣಿ ಪರಿಷ್ಕರಣೆಯ 5000 ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.