ನವದೆಹಲಿ: ಮ್ಯಾನ್ಮಾರ್ ರಾಷ್ಟ್ರದ ಸ್ವಾತಂತ್ರ್ಯ ದಿನದ ಅಂಗವಾಗಿ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಎರಡೂ ರಾಷ್ಟ್ರಗಳ ನಿಕಟ ಸ್ನೇಹ ಸಂಬಂಧಗಳ ಪ್ರಯತ್ನಗಳು ಯಶಸ್ಸು ಸಾಧಿಸಲಿದೆ ಹಾಗೂ ಆಯಾ ಅಭಿವೃದ್ಧಿ ಗುರಿಗಳ ಸಾಕ್ಷಾತ್ಕಾರವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ಮ್ಯಾನ್ಮಾರ್ ಒಕ್ಕೂಟ ಗಣತಾಜ್ಯದ ಸ್ವಾತಂತ್ರ್ಯ ದಿನದ ಅಂಗವಾಗಿ ಭಾರತ ಸರ್ಕಾರ, ಭಾರತದ ಜನತೆಯ ಪರವಾಗಿ ಶುಭಾಶಯ ಮತ್ತು ಸ್ವಾಗತವನ್ನು ಕೋರುತ್ತೇನೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಮ್ಯಾನ್ಮಾರ್ ಸುದೀರ್ಘವಾದ ಸ್ನೇಹ ಸಂಬಂಧಗಳನ್ನು ಹೊಂದಿದೆ ಎಂದ ಅವರು, 2016ರ ಆಗಸ್ಟ್ನಲ್ಲಿ ಮ್ಯಾನ್ಮಾರ್ ಅಧ್ಯಕ್ಷರ ಭಾರತ ಭೇಟಿ ವೇಳೆ ನಡೆದ ದ್ವಿಪಕ್ಷೀಯ ಸಂಬಂಧಗಳ ಮಾತುಕತೆ, ಜಂಟಿಯಾಗಿ ಗುರುತಿಸಲಾದ ಆಸಕ್ತಿದಾಯಕ ಕ್ಷೇತ್ರಗಳ ಹಂಚಿಕೆ, ಪರಸ್ಪರ ಲಾಭಕ್ಕಾಗಿ ಸಹಕಾರ ಬಲಪಡಿಸುವ ಕುರಿತು ನಡೆಸಿದ ಮಾತುಕತೆಯನ್ನು ಅವಲೋಕಿಸಲಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.
ಇದೇ ವೇಳೆ ನ್ಯಾನ್ಮಾರ್ ಜನತೆಯ ಏಳಿಗೆ ಮತ್ತು ಪ್ರಗತಿಗಾಗಿ ಶುಭ ಹಾರೈಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.