ನವದೆಹಲಿ: ಸಮಾಜ ಸುಧಾರಕಿ ಹಾಗೂ ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಇಂಡಿಯಾ ವಿಶೇಷ ಡೂಡಲ್ ಮೂಲಕ ಗೌರವ ಅರ್ಪಿಸಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಆಗುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಹೋರಾಡಲು ಸಾವಿತ್ರಿಬಾಯಿ ಫುಲೆ ಹಾಗೂ ಅವರ ಪತಿ ಜ್ಯೋತಿರಾವ್ ಫುಲೆ ಮುಂದಾಗಿದ್ದರು.
ಮಹಾರಾಷ್ಟ್ರದ ನೈಗಾಂವ್ನಲ್ಲಿ ಜ.3ರಂದು ರೈತ ಕುಟುಂಬದಲ್ಲಿ ಜನಿಸಿದ್ದ ಅವರು, ಸಮಾಜ ಸುಧಾರಕಿ ಹಾಗೂ ಕವಿಯಿತ್ರಿಯಾಗಿ ಬೆಳೆದರು. ಅವರು ಬ್ರಿಟಿಷ್ ಇಂಡಿಯಾದ ಆಡಳಿತದಲ್ಲಿ ಮಹಿಳೆಯರ ಹಕ್ಕುಗಳ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಯಾವುದೇ ರೀತಿಯ ಶೋಷಣೆಗೆ ಒಳಗಾದ ಮಹಿಳೆಯರ ಉದ್ಧಾರಕರಾಗಿದ್ದ ಸಾವಿತ್ರಿಬಾಯಿ, ಲೈಂಗಿಕ ಕಿರುಕುಳ ಎದುರಿಸುತ್ತಿದ್ದವರಿಗಾಗಿ ರಕ್ಷಣಾ ಕೇಂದ್ರ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಗೆ ‘ಬಾಲ್ಹತ್ಯಾ ಪ್ರತಿಬಂಧಕ್ ಗೃಹ’ವನ್ನು ಆರಂಭಿಸಿದ್ದರು.
ಅವರು 1848ರಲ್ಲಿ ಪುಣೆಯ ಭಿಡೆವಾಡದಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ಸ್ಥಾಪಿಸಿದ್ದರು. ಮಹಿಳೆಯರ ಉದಾತ್ತ ಕಾರ್ಯಗಳಲ್ಲದೇ ಸಮಾಜದಲ್ಲಿ ನಡೆಯುತ್ತಿದ್ದ ಜಾತಿ ಮತ್ತು ಲಿಂಗ ತಾರತಮ್ಯದ ಹೆಸರಲ್ಲಿ ಅನುಚಿತ ವರ್ತನೆಗಳನ್ನು ತಡೆಗಟ್ಟಲು ಅವರು ಉದಾರತೆಯಿಂದ ಕಾರ್ಯ ನಿರ್ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.