×
Home About Us Advertise With s Contact Us

‘ಮೋದಿ ಮ್ಯಾಂಗೋ’ ಮೋದಿಗೆ ತಿನ್ನಿಸಲು ಕಾತರ

kalimullaಲಕ್ನೋ: ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮಾವಿನ ಹಣ್ಣು ಬೆಳೆಗಾರ ಹಾಜಿ ಖಲಿಮುಲ್ಲಾ ಅವರು ತನ್ನ ಹೊಸ ಮಾವಿನ ಹಣ್ಣಿನ ತಳಿಗೆ ‘ಮೋದಿ ಮ್ಯಾಂಗೋ’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಮಾವಿನ ಹಣ್ಣನ್ನು ಮೋದಿಗೆ ನೀಡಲು ಕಾತುರರಾಗಿದ್ದಾರೆ.

‘ಮೋದಿ ಮ್ಯಾಂಗೋ ತಳಿಯ ಮೊದಲ ಬೆಳೆಯನ್ನು ಪ್ರಧಾನಿಯರಿಗೆ ನೀಡುವ ಸಲುವಾಗಿ ಎತ್ತಿಟ್ಟಿದ್ದೇನೆ. ಆದರೆ ಅವರಿಗೆ ಹೇಗೆ ಕಳುಹಿಸಿಕೊಡಲಿ ಎಂದು ನನಗೆ ತಿಳಿಯುತ್ತಿಲ್ಲ. ಈ ಹಣ್ಣಿನ ರುಚಿಯನ್ನು ಅವರು ಸವಿಯಬೇಕೆಂಬುದು ನನ್ನ ಆಶಯ’ ಎನ್ನುತ್ತಾರೆ ಖಲಿಮುಲ್ಲಾ.

‘ಮೋದಿ ಮ್ಯಾಂಗೋ ನೋಡಲು ಸುಂದರವಾಗಿದೆ. ಅಷ್ಟೇ ಅಲ್ಲದೇ ತುಂಬಾನೇ ರುಚಿಯಾಗಿದೆ, ಇದನ್ನು ಸವಿದವರೆಲ್ಲರೂ ಹಾಡಿಕೊಂಡಾಡಿದ್ದಾರೆ ಎನ್ನುವ ಖಲಿಮುಲ್ಲಾ ೩೦೦ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

 

Recent News

Back To Top
error: Content is protected !!