ನವದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧದ ನಂತರ ಕಾಳಧನಿಕರನ್ನು ಗುರಿಯಾಗಿಸಿದ್ದು, ಇದೀಗ ಡಿಸೆಂಬರ್ 30ರ ಬಳಿಕ 10,000 ಮೇಲ್ಪಟ್ಟು ಹಳೆ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಹೊಂದಿರುವವರ ಮೇಲೆ ದಂಡ ವಿಧಿಸಲು ಮುಂದಾಗಿದೆ.
ಕೇಂದ್ರ ಸರ್ಕಾರ ಡಿ.30 ನಂತರ ಹಳೆ ನೋಟು ಹೊಂದಿರುವವರು ಅಥವಾ ಬ್ಯಾಂಕ್ಗಳಲ್ಲಿ ಠೇವಣಿ ಮಾಡುವವರ ಮೇಲೆ 50 ಸಾವಿರದ ವರೆಗೆ ದಂಡ ವಿಧಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಂಡು ಸುಗ್ರೀವಾಜ್ಞೆ ನೀಡಲು ಸಿದ್ಧತೆ ನಡೆಸುತ್ತಿದೆ.
ಡಿ.30ರ ನಂತರ ವ್ಯಕ್ತಿಯು 500 ರೂ. ಮತ್ತು 1000 ರೂ. ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿದಲ್ಲಿ ಆತನ ಮೇಲೆ 50 ಸಾವಿರ ರೂ. ವರೆಗೆ ದಂಡ ಅಥವಾ ಆತ ಹೊಂದಿದ ಹಣದ 5 ಪಟ್ಟು ದಂಡ ವಿಧಿಸಲು ಸರ್ಕಾರ ಮುಂದಾಗಿದೆ.
ಇನ್ನು ಹಳೇ ನಿಷೇಧಿತ ನೋಟು ಹೊಂದಿರುವವರಿಗೆ ಮಾರ್ಚ್ 31ರ ವರೆಗೆ ಆರ್ಬಿಐನಲ್ಲಿ ಠೇವಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವುದೇ ಸಂದರ್ಭದಲ್ಲಿ ಇದನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅಕ್ರಮ ಆಸ್ತಿ ಹೊಂದಿದವರು ಮಾ.31, 2017ರ ವರೆಗೆ ಅದನ್ನು ಬಹಿರಂಗ ಪಡಿಸಲು ಸಮಯ ನೀಡಲಾಗಿದ್ದು, ಶೇ.50ರಷ್ಟು ತೆರಿಗೆ ಹಾಗೂ ಮುಂದಿನ ನಾಲ್ಕು ವರ್ಷಗಳಿಗೆ ಶೇ.25ರಷ್ಟು ಹೆಚ್ಚುವರಿ ದಂಡ ಪಾವತಿಸಬೇಕಿದೆ.
ಕೇಂದ್ರ ಸರ್ಕಾರ ಇದರ ಬಗ್ಗೆ ಅಧಿಕತ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.