ನವದೆಹಲಿ: ಭಾರತೀಯ ಹಾಕಿ ತಂಡದ ಆರು ಮಂದಿ ಆಟಗಾರರು ಸೇರಿದಂತೆ ಒಂಬತ್ತು ಮಂದಿ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಕ್ರೀಡೆಗಳ ಕೋಟಾ ಅಡಿಯಲ್ಲಿ ಪೊಲೀಸ್ ಉಪ ಅಧೀಕ್ಷಕರಾಗಿ ಪಂಜಾಬ್ ಸರ್ಕಾರ ನೇಮಿಸಿದೆ.
2014ರ ಏಷ್ಯನ್ ಕ್ರೀಡಾಕೂಟದ ಸ್ವರ್ಣ ವಿಜೇತ ಹಾಕಿ ತಂಡದ ಆಟಗಾರರಾದ ಮಿಡ್ಫೀಲ್ಡರ್ ಮನ್ಪ್ರೀತ್ ಸಿಂಗ್, ಫಾರ್ವರ್ಡ್ ಆಟಗಾರ ಆಕಾಶ್ದೀಪ್ ಸಿಂಗ್, ಸರ್ವನ್ಜೀತ್ ಸಿಂಗ್, ರಮಣ್ದೀಪ್ ಸಿಂಗ್, ಗುರ್ವಿಂದರ್ ಸಿಂಗ್ ಚಾಂಡಿ ಹಾಗೂ ಧರಮ್ವೀರ್ ಸಿಂಗ್ ಅವರನ್ನು ಪಂಜಾಬ್ ಪೊಲಿಸ್ನ ಡಿಎಸ್ಪಿ ಆಗಿ ನೇಮಕ ಮಾಡಲಾಗಿದೆ.
ಮನ್ಪ್ರೀತ್ ಹಾಗೂ ಆಕಾಶ್ದೀಪ್ ಸಿಂಗ್ ಲಂಡನ್ನಲ್ಲಿ ಈ ವರ್ಷ ನಡೆದ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು.
ಪೊಲೀಸ್ ಡಿಎಸ್ಪಿ ಆಗಿ ನೇಮಕಗೊಂಡಿರುವುದು ಅತ್ಯಂತ ಗೌರವದ ಸಂಗತಿ. ಹಾಕಿಯಲ್ಲಿ ನಮ್ಮ ಸಾಧನೆಗಳನ್ನು ಗುರುತಿಸಿದ್ದಕ್ಕೆ ಪಂಜಾಬ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.