ನವದೆಹಲಿ: ಕೇಂದ್ರ ಸರ್ಕಾರದ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯ ಪ್ರದೇಶಿಕ ಸಾರಿಗೆ ಕಚೇರಿಗಳು ಜನವರಿಯಿಂದ ಡಿಜಿಟಲ್ ವಹಿವಾಟು ನಡೆಸಲಿವೆ. ಅದರಂತೆ ವಾಹನ ಚಾಲನಾ ಪರವಾನಗಿ, ಆಟೋರಿಕ್ಷಾ ಪರವಾನಗಿ, ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೇವೆಗಳು ಡಿಜಿಟಲ್ ಆಗಲಿವೆ.
ಸಾರಿಗೆ ಇಲಾಖೆ ವಲಯಗಳ ಕಚೇರಿಗಳಲ್ಲಿ ಪಾಂಯಿಂಟ್-ಆಫ್-ಸೇಲ್ ಯಂತ್ರಗಳನ್ನು ಅಳವಡಿಸಿದ್ದು, ಕೆಲವೆಡೆ ನಗದು ರಹಿತ ವ್ಯವಹಾರವನ್ನು ಪರೀಕ್ಷಾರ್ಥವಾಗಿ ನಡೆಸಲಾಗುತ್ತಿದೆ.
ಜನವರಿ ತಿಂಗಳಿನಿಂದ ಆರ್ಟಿಒ ಕಚೇರಿಯ ವಿವಿಧ ಸೇವೆಗಳ ಶುಲ್ಕವನ್ನು ಕಟ್ಟುವರರು ತಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು. ಅರ್ಜಿದಾರರು ನಗದು ಮೂಲಕ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಾದ್ಯಂತ ಸಾರಿಗೆ ಇಲಾಖೆಯ ೧೪ ವಲಯಗಳಿದ್ದು, ಯಾವುದೇ ಅಡ್ಡಿ-ಆತಂಕರಹಿತ ವ್ಯವಹಾರವನ್ನು ಖಚಿತಪಡಿಸಲಿದೆ. ದೆಹಲಿ ಸರ್ಕಾರ ಎಲ್ಲ ಇಲಾಖೆಗಳನ್ನು ನಗದು ರಹಿತ ವ್ಯವಹಾರ ವ್ಯವಸ್ಥೆ ಅಡಸಿಯಲ್ಲಿ ತರುವಲ್ಲಿ ಕ್ರಮಗಳನ್ನು ಜಾರಿಗೊಳಿಸುವ ಯೋಜನೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಸಾರಿಗೆ ಸಚಿವ ಸತ್ಯೇಂದ್ರ ಜೈನ್ ಇಲಾಖೆಯ ಎಲ್ಲ ಸೇವೆಗಳ ಪಾವತಿಗಳನ್ನು ಬ್ಯಾಂಕ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಸ್ವೀಕರಿಸುವಂತೆ ಸೂಚಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.