ನವದೆಹಲಿ: ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆಗಾಗ ನಿಯಮಗಳನ್ನು ಬದಲಾಯಿಸುತ್ತಿರುವ ಬಗ್ಗೆ ಜನರು ಪ್ರಶ್ನಿಸುತ್ತಿದ್ದು, ಅನಾಣ್ಯೀಕರಣ ನಿಯನಗಳ ಬದಲಾವಣೆ ಕ್ರಿಯಾಶೀಲ ಸರ್ಕಾರದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲಿಸಲು ಸಾಧ್ಯವಾಗದ ಜನರು ಸರ್ಕಾರದ ದೋಷಗಳನ್ನು ಹುಡುಕುವಲ್ಲಿ ಪಟ್ಟುಹಿಡಿಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಹೇಳಿದ್ದಾರೆ.
ನಿಯಮಗಳು ಕಾಲ-ಕಾಕ್ಕೆ ಬದಲಾಗಲು ಮತ್ತೊಂದು ಕಾರಣವೆಂದರೆ ಈ ಸರ್ಕಾರ ಜನರ ಸಲುವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ನಿರಂತರವಾಗಿ ಜನರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸುತ್ತಿದೆ. ಹೀಗಿರುವಾಗ ಜನರು ತೊಂದರೆ ಅನುಭವಿಸುತ್ತಿರುವ ವಿಭಾಗಗಳು ಯಾವುದು, ಅವರಿಗೆ ಅಡ್ಡಿ ಉಂಟು ಮಾಡುತತ್ತಿರುವ ನಿಯಮಗಳು ಯಾವುದು? ಇದಕ್ಕೆ ಸಂಭವನೀಯ ಪರಿಹಾರಗಳೇನು ಎಂದು ತಿಳಿದುಕೊಂಡು ಪರಿಹರಿಸುವ ಪ್ರಯತ್ನದೊಂದಿಗೆ ನಿಯಮಗಳನ್ನು ಬದಲಾಯಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನವೆಂಬರ್ 8ರ ನೋಟು ನಿಷೇಧದ ನಂತರ ರಿಸರ್ವ್ ಬ್ಯಾಂಕ್ ಸುಮಾರು 60 ಬಾರಿ ಆದೇಶವನ್ನು ಹೊರಡಿಸಿದೆ. ವಿಪಕ್ಷಗಳ ಟೀಕೆಗಳು ಮತ್ತು ನೋಟು ನಿಷೇಧಕ್ಕೆ ಬೆಂಬಲಿಸುತ್ತಿರುವ ಜನರನ್ನು ಪರಿಗಣಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಕಪ್ಪು ಹಣದ ವಿರುದ್ಧ ಹೋರಾಟಕ್ಕೆ ಇದು ಅಗತ್ಯವಿದ್ದು, ಕಪ್ಪು ಹಣ ಹುಡಿಕೆದಾರರು ಸರ್ಕಾರದ ಪ್ರಯತ್ನಗಳಿಗೆ ತಡೆಯೊಡ್ಡುತ್ತಿದ್ದಾರೆ. ‘ಕಪ್ಪು ಹಣ ಹೂಡಿಕೆದಾರರು ಪ್ರತಿಯೊಂದು ಗೆಲ್ಲಿನಲ್ಲಿ ಇದ್ದರೆ ನಾವು ಪ್ರತಿಯೊಂದು ಎಲೆಗಳಲ್ಲಿ ಇರುವುದು ಅವಶ್ಯಕ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾವು ಕಪ್ಪು ಹಣ ಹೂಡಿಕೆದಾರರು ಮತ್ತು ಭ್ರಷ್ಟರನ್ನು ನಿರ್ಮೂಲನೆಗೆ ಮುಂದಾಗಿದ್ದು, ವಿರೋಧಿಗಳು ಹೊಸ ತಂತ್ರಗಳನ್ನು ಬಳಸುತ್ತಿದ್ದರೆ ನಾವು ಪ್ರತಿರೋಧ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.