ಗುರ್ಗಾಂವ್: ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಹರ್ಯಾಣದ ಗುರ್ಗಾಂವ್ನಲ್ಲಿ ಸೋಮವಾರ ಡಿಜಿ ಧನ್ ಮೇಳವನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಗ್ರಾಹಕರು ಕೇವಲ ನಗದು ರಹಿತ ಡಿಜಿಲ್ ಮಾದರಿಯಲ್ಲೇ ವ್ಯವಹಾರ ನಡೆಸಲು ಸಾಧ್ಯವಾಗಲಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಗೊಬ್ಬರ ಹಾಗೂ ರಾಸಾಯನಿಕ ವ್ಯವಹಾರಗಳ ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಯೋಜನೆ, ನಗರಾಭಿವೃದ್ಧಿ ಹಾಗೂ ವಸತಿ ಮತ್ತು ಬಡತನ ನಿವಾರಣೆಗಳ (ಸ್ವತಂತ್ರ) ಕೇಂದ್ರ ಸಚಿವ ರಾವ್ ಇಂದರ್ಜೀತ್ ಸಿಂಗ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದು ಅನಾಣ್ಯೀಕರಣದ ಬಳಿಕ ಮೊಬೈಲ್ ಬಳಸಿ ನಗದು ರಹಿತ ವ್ಯವಹಾರದ ಮೂಲಕ ಖರೀದಿ ನಡೆಸಲು ಜನರಿಗೆ ಮಾಹಿತಿ ನೀಡುವ ದೇಶದ ಪ್ರಥಮ ಉತ್ಸವವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನೀತಿ ಆಯೋಗ ಹಾಗೂ ಗುರ್ಗಾಂವ್ ಐಟಿ ಮತ್ತು ಜಿಲ್ಲಾಡಳಿತ ಇಲಾಖೆಗಳ ಸಂಯೋಜನೆಯೊಂದಿಗೆ ಆಯೋಜಿಸಲಾದ ಮೇಳ ಇದಾಗಿದೆ. ಕರಕುಶಲ ವಸ್ತುಗಳು, ತೋಟಗಾರಿಕಾ ವಸ್ತುಗಳು, ತರಕಾರಿ, ಗೊಬ್ಬರ, ಬಿತ್ತನೆ ಬೀಜಗಳು ಸೇರಿದತೆ ಎಲ್ಲ ರೀತಿಯ ದಿನಸಿ ಸಾಮಗ್ರಿಗಳು ಮೇಳದಲ್ಲಿ ಲಭ್ಯವಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.