ನವದೆಹಲಿ : ಡಿ. 30 ರ ಬಳಿಕ ವಿತ್ಡ್ರಾ ಮಿತಿ ಸಂಪೂರ್ಣವಾಗಿ ಹಿಂಪಡೆಯಲಾಗಬಹುದು ಎಂಬ ಜನರ ನಿರೀಕ್ಷೆ ಈಡೇರುವಂತೆ ಕಾಣುತ್ತಿಲ್ಲ. ಬದಲಾಗಿ ಈಗಿರುವ ವಿತ್ಡ್ರಾ ಮಿತಿ ಹೀಗೇ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನೋಟು ನಿಷೇಧದ ಬಳಿಕ ದೇಶದಾದ್ಯಂತ ಎದುರಾಗಿರುವ ನಗದು ಬಿಕ್ಕಟ್ಟು ಶಮನಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹೊಸ ನೋಟು ಮುದ್ರಣದ ನಂತರವೂ ಬಹಳಷ್ಟು ನಗದು ಬಿಕ್ಕಟ್ಟು ಸಂಭವಿಸುತ್ತಿರುವುದರ ಹಿನ್ನಲೆಯಲ್ಲಿ ಬ್ಯಾಂಕ್ಗಳಿಂದ ಹಣವನ್ನು ವಿತ್ಡ್ರಾ ಮಾಡುವ ಮಿತಿಯನ್ನು ಈಗಿರುವಂತೆಯೇ ಮುಂದುವರೆಸುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.
ಆರ್ಬಿಐನಿಂದ ನಿರೀಕ್ಷಿತ ಮಟ್ಟದಲ್ಲಿ ಹೊಸ ನೋಟುಗಳ ಪೂರೈಕೆ ಬ್ಯಾಂಕ್ಗಳಿಗೆ ಆಗುತ್ತಿಲ್ಲ. ಇದರಿಂದಾಗಿ ಪ್ರಸ್ತುತ ವಾರಕ್ಕೆ 24 ಸಾವಿರ ರೂ.ಗಳ ವಿತ್ಡ್ರಾ ಮಿತಿಯನ್ನು ಇನ್ನಷ್ಟು ದಿನಗಳ ಕಾಲ ಮುಂದುವರೆಸಬೇಕು ಎಂದು ಬ್ಯಾಂಕ್ಗಳು ಹಾಗೂ ಬ್ಯಾಂಕಿಂಗ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೆಲ ಭ್ರಷ್ಟ ಅಧಿಕಾರಿಗಳಿಂದಾಗಿ ಈಗಾಗಲೇ ಮುದ್ರಣವಾದ ಹೊಸ ನೋಟುಗಳ ಪೈಕಿ ಕೆಲ ಪ್ರಮಾಣದ ನೋಟುಗಳು ಕಾಳಧನಿಕರ ಕೈ ಸೇರಿದೆ. ಕಾಳಧನಿಕರ ಮೇಲೆ ಅಧಿಕಾರಿಗಳು ದಾಳಿ ಮಾಡಿ ಅವೆಲ್ಲವನ್ನೂ ವಶಪಡಿಸಿಕೊಂಡಿದ್ದರೂ ಅಪಾರ ಪ್ರಮಾಣದ ನಗದನ್ನು ಚಲಾವಣೆಗೆ ತರಲು ಕೆಲ ಕಾನೂನಿನ ಅಡೆ-ತಡೆಗಳಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.