ನವದೆಹಲಿ : ಅನಿವಾಸಿ ಭಾರತೀಯರಿಗಾಗಿ ತುರ್ತು ನೆರವು ನೀಡುವ ಕಾರ್ಯಕ್ಕಾಗಿ ಟ್ವಿಟರ್ ಸೇವಾ ಎಂಬ ಹೊಸ ಸೇವೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಟ್ವೀಟ್ ಮೂಲಕ ಹಲವರಿಗೆ ಸಹಾಯ ಮಾಡುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರೇರಣೆಯಿಂದಾಗಿ ವಿದೇಶಾಂಗ ಸಚಿವಾಲಯವು ಟ್ವಿಟರ್ ಸೇವಾ ಎಂಬ ಹೊಸ ಸೇವೆಗೆ ಚಾಲನೆ ನೀಡಿದೆ.
@MEAIndia, @Indiandiplomacy, @MEAQuery ಇವುಗಳಿಗೆ ಟ್ವೀಟ್ ಮೂಲಕ ಸಮಸ್ಯೆಯನ್ನು ತಿಳಿಸಿದರೆ ಟ್ವಿಟರ್ ಸೇವಾ ತಕ್ಷಣವೇ ಸ್ಪಂದಿಸಲಿದೆ ಎನ್ನಲಾಗಿದೆ.
ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಕೆ. ಸಿಂಗ್ ಅವರು ಟ್ವಿಟರ್ ಸೇವಾ ಯೋಜನೆಗೆ ಚಾಲನೆ ನೀಡಿದರು. ವಿದೇಶಾಂಗ ಸಚಿವಾಲಯವೇ ಎಲ್ಲಾ ಟ್ವೀಟ್ಗಳನ್ನು ನಿರ್ವಹಿಸಿ, ಸಹಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದರು.
New frontiers in the use of digital for citizen engagement. MoS @Gen_VKSingh launches #TwitterSeva for passport and consular services pic.twitter.com/kpqX48598d
— Vikas Swarup (@MEAIndia) December 23, 2016
ವಿದೇಶಗಳ 198 ಭಾರತೀಯ ರಾಯಭಾರಿ ಕಛೇರಿ ಸೇರಿದಂತೆ ದೇಶದಲ್ಲಿರುವ 29 ಪ್ರಾದೇಶಿಕ ಪಾಸ್ಪೋರ್ಟ್ ಕಛೇರಿಗಳನ್ನು ಇದು ನಿರ್ವಹಣೆ ಮಾಡಲಿದ್ದು, ವಿದೇಶದಲ್ಲಿರುವ ಭಾರತೀಯರಿಗೆ ನೆರವಾಗಲು ಮತ್ತು ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಈ ನೂತನ ಸೇವಾ ಯೋಜನೆ ಟ್ವಿಟರ್ ಸೇವಾ ನೆರವಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.