ರಾಯ್ಗಢ: ಹೆಚ್ಚಿನ ಮೌಲ್ಯದ ನೋಟುಗಳ ನಿಷೇಧಿಸಲು ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಭವಿಷ್ಯದ ನಿರ್ಮಾಣಕ್ಕೆ ದೀರ್ಘಾವಧಿ ವಿತ್ತೀಯ ನೀತಿಗಳನ್ನು ಜಾರಿಗೊಳಿಸುವದಾಗಿ ಹೇಳಿದ್ದಾರೆ.
ರಾಯಗಢದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರುಕಟ್ಟೆಗೆ ಚಾಲನೆ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಅನಾಣ್ಯೀಕರಣ ಒಂದು ದೀರ್ಘಕಾಲದ ಲಾಭಕ್ಕಾಗಿ ಅಲ್ಪಾವಧಿಯ ನೋವು ಆಗಿದೆ. ಎನ್ಡಿಎ ಸರ್ಕಾರ ಅಲ್ಪಾವಧಿ ರಾಜಕೀಯ ಲಾಭಕ್ಕಾಗಿ ಎಂದಿಗೂ ಯಾವುದೇ ನಿರ್ಧಾಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಭಾರತವನ್ನು ಅಭಿವೃದ್ಧಿಯುತ ರಾಷ್ಟ್ರವನ್ನಾಗಿ ರೂಪಿಸುವುದು ಸರ್ಕಾರದ ಗುರಿ ಎಂದು ಹೇಳಿದ ಅವರು, ಆರ್ಥಿಕ ಮಾರುಕಟ್ಟೆಗಳಿಂದ ಲಾಭ ಪಡೆಯುವವರು ತೆರಿಗೆ ಕಟ್ಟುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದ್ದಾರೆ.
ಗ್ರಾಮಗಳಲ್ಲಿ ಆಗುವ ಬದಲಾವಣೆಗಳುನಿಜವಾದ ಯಶಸ್ಸಿನ ಮಾನದಂಡಗಳಾಗಿವೆ. ಅದು ದೆಹಲಿಯ ದಲಾಲ್ ಸ್ಟ್ರೀಟ್ ಅಥವಾ ಲುಟಿಯೆನ್ಸ್ ದೆಹಲಿಯಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.
ದೇಶವನ್ನು ಅಭಿವೃದ್ಧಿಯುತ ರಾಷ್ಟ್ರವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದು, ಇದರಿಂದ ಸಾಕಷ್ಟು ಟೀಕೆಗಳನ್ನೂ ಎದುರಿಸುತ್ತಿದೆ. ಆದರೂ ನಿರ್ಧಾರಗಳನ್ನು ಕೈಗೊಂಡಿದೆ.
ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ವಗಳಿಂದ ಬಾಕಿ ಇದ್ದ ಜಿಎಸ್ಟಿ ಮೇಲಿನ ಸಾಂವಿಧಾನಿಕ ತಿದ್ದುಪಡಿಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಜಿಎಸ್ಟಿ ಜಾರಿಗೆ ಬೆಲಿದೆ. ವಿದೇಶಿ ನೇರ ಹೂಡಿಕೆ ಈಗ ದಾಖಲೆ ಮಟ್ಟವನ್ನು ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.