ಬೆಂಗಳೂರು: ಹೆಚ್ಆರ್ಎಸ್ ಲೇಔಟ್ನ ಕುಡ್ಲುವಿನಲ್ಲಿರುವ ಕರ್ನಾಟಕ ಕಾಂಪೋಸ್ಟ್ (ಮಿಶ್ರಗೊಬ್ಬರ) ಅಭಿವೃದ್ಧಿ ನಿಗಮದ ಸ್ಥಾವರ (ಘಟಕ) ಕೆಎಸ್ಡಿಸಿಯನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಾಯ ಕೋರಿ ನೂರಾರು ಶಾಲಾ ಮಕ್ಕಳು ಅಂಚೆಪತ್ರಗಳನ್ನು ಕಳುಹಿಸುತ್ತಿದ್ದಾರೆ.
ನ್ಯೂ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯು ಬರೆದ ಪತ್ರದಲ್ಲಿ ’ದಯವಿಟ್ಟು ಇಲ್ಲಿನ ಘಟಕವನ್ನು ನಿಲ್ಲಿಸಿ. ಇವುಗಳಿಂದ ಹೊರಸೂಸುವ ದುರ್ವಾಸನೆಯಿಂದ ನಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯುಂಟಾಗುತ್ತಿದೆ ಹಾಗೂ ವಿಷಕಾರಿ ಅನಿಲಗಳು ವಾತಾವರಣದಲ್ಲಿ ವಿಲೀನಗೊಳ್ಳುತ್ತಿರುವುದರಿಂದ ಆರೋಗ್ಯದ ಸಮಸ್ಯೆಗಳೂ ಹೆಚ್ಚುತ್ತಿವೆ.’ ಎಂದು ಬರೆಯಲಾಗಿದೆ.
ಹಾಗೆ ಇನ್ನೊಂದು ಪತ್ರದಲ್ಲಿ ’ಇಲ್ಲಿನ ಘಟಕಗಳು ಸಾಮಾನ್ಯ ನಾಗರಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ, ಸುತ್ತಮುತ್ತಲಿನ ಜನರಿಗೆ ಇದು ವಿಷವಾಗಿದೆ’ ಎಂದು ಬರೆದಿದ್ದಾರೆ.
ಈ ಘಟಕವನ್ನು 1974-75 ರಲ್ಲಿ ತೇವದ ತ್ಯಾಜ್ಯವನ್ನು ಮಿಶ್ರಗೊಬ್ಬರವಾಗಿ ಪರಿವರ್ತಿಸಲು ಸ್ಥಾಪಿಸಲಾಗಿತ್ತು ಆದರೆ ಈಗ ಅದು ತನ್ನ ಸಾಮರ್ಥ್ಯಕ್ಕೂ ಮೀರಿ ಹೆಚ್ಚು ಕೆಲಸ ನಿರ್ವಹಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇದರಿಂದ ಉತ್ಪಾದನೆಯಾಗುತ್ತಿರುವ ದುರ್ವಾಸನೆಯಿಂದಾಗಿ 2 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬರೂ ತೊಂದರೆ ಅನುಭವಿಸುವಂತಾಗಿದೆ. ಈ ಘಟಕದ ಸಾಮರ್ಥ್ಯ 70 ಟನ್ಗಳಷ್ಟಿರುವಾಗ ಪ್ರತಿದಿನ 100 ಟನ್ಗಳಷ್ಟು ತ್ಯಾಜ್ಯವನ್ನು ಇಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಇಲ್ಲಿನ ನಿವಾಸಿ ರಘುನಾಧ ಪೇಟಾ ಹೇಳಿದ್ದಾರೆ.
ಈ ವಿಷದ ಕುರಿತಂತೆ ನಾವು ಕಳೆದ ವರ್ಷ ಶಾಂತಿಯುತ ಪ್ರತಿಭಟನೆ ಕೈಗೊಂಡಿದ್ದೆವು. ಆಗ ಬಿಬಿಎಂಪಿಯ ಅಧಿಕಾರಿಗಳು ಘಟಕದ ಸಾಮರ್ಥ್ಯದ ಅನುಗುಣವಾಗಿ ತ್ಯಾಜ್ಯವನ್ನು ಹಾಕುವುದಾಗಿ ಮಾತು ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಅವರು ಯಾವುದೇ ಕೆಲಸ-ಕಾರ್ಯಗಳನ್ನು ಮಾಡಿಲ್ಲ ಮತ್ತು ಇಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ನಿವಾಸಿ ಪೇಟಾ ಹೇಳಿದ್ದಾರೆ.
ನಾವು ಬಿಬಿಎಂಪಿ ಜೊತೆ ಮಾತನಾಡಲು ಹೋದರೆ, ಅವರು 15 ದಿನದೊಳಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ ಆದರೆ ಇದು ಹೀಗೇ ಮುಂದುವರೆಯುತ್ತದೆ. ಗುತ್ತಿಗೆದಾರ ಕೇಬಲ್ ಕೆಲಸವನ್ನು ಮುಂದೂಡಿರುವುದರಿಂದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳುತ್ತಾರೆ.
ಸುತ್ತಮುತ್ತಲಿನ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದು, ಇದೀಗ ಅಲ್ಲಿನ ಮಕ್ಕಳೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆಪತ್ರಮುಖೇನ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಮಕ್ಕಳ ಅಂಚೆಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.