ನವದೆಹಲಿ: ಸನಿಹದಲ್ಲಿರುವ ಸಾರ್ವಜನಿಕ ಶೌಚಗೃಹ ಪತ್ತೆ ಮಾಡುವ ಗೂಗಲ್ ಮ್ಯಾಪ್ನ ‘ಟಾಯ್ಲೆಟ್ ಲೊಕೇಟರ್’ ಎಂಬ ಆ್ಯಪ್ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಶೌಚಗೃಹ ಹುಡುಕುವುದು ಒಂದು ದೊಡ್ಡ ಸಮಸ್ಯೆಯಾಗಿದ್ದು. ಈ ನೂತನ ಆ್ಯಪ್ನಿಂದಾಗಿ ಸನಿಹದಲ್ಲಿರುವ ಶೌಚಗೃಹ ಪತ್ತೆ ಮಾಡುವುದು ಸುಲಭವಾಗಲಿದೆ. ಸ್ವಚ್ಛ ಭಾರತದ ಅಂಗವಾಗಿ ಈ ಆ್ಯಪ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ಚಾಲನೆ ನೀಡಿದ್ದಾರೆ.
ಈ ಆ್ಯಪ್ನಿಂದ ಹತ್ತಿರದಲ್ಲಿರುವ ಸ್ವಚ್ಛ ಶೌಚಗೃಹವನ್ನು ಸಾರ್ವಜನಿಕರು ಸುಲಭವಾಗಿ ಪತ್ತೆ ಹಚ್ಚಬಹುದು. ಟಾಯ್ಲೆಟ್ ಲೊಕೇಟರ್ ಆ್ಯಪ್ನಲ್ಲಿ ಸಾರ್ವಜನಿಕ ಶೌಚ ಗೃಹ ಎಲ್ಲಿ ಎಂದು ಹುಡುಕಿದರೆ ಹತ್ತಿರದಲ್ಲಿರುವ ಶೌಚಗೃಹದ ಮಾಹಿತಿ ಸಿಗುತ್ತದೆ.
ಪ್ರಸ್ತುತ ದೆಹಲಿ, ಗುರುಗ್ರಾಮ್, ಫರೀದಾಬಾದ್, ಘಾಜಿಯಾಬಾದ್, ನೊಯ್ಡಾ, ಇಂದೋರ್ ಮತ್ತು ಭೋಪಾಲ್ ನಗರಗಳಲ್ಲಿರುವ ಸಾರ್ವಜನಿಕ ಶೌಚಗೃಹಗಳು ಮಾತ್ರ ಈ ಆ್ಯಪ್ನಲ್ಲಿ ಸಿಗಲಿವೆ. ಈ 7 ನಗರಗಳಿಂದ ಸುಮಾರು 6,200 ಕ್ಕೂ ಹೆಚ್ಚು ಸಾರ್ವಜನಿಕ ಶೌಚಗೃಹಗಳು ಈ ಆ್ಯಪ್ನಲ್ಲಿ ಸಿಗುತ್ತವೆ.
ಶೌಚಗೃಹಕ್ಕೆ ಸಂಬಂಧಿಸಿದಂತೆ ಈ ಆ್ಯಪ್ನಲ್ಲಿ ಸ್ವಚ್ಛತೆಯ ರೇಟಿಂಗ್, ಶೌಚಗೃಹವು ಇಂಡಿಯನ್ ಅಥವಾ ವೆಸ್ಟರ್ನ್ ಶೈಲಿಯದೇ, ಪೇಯ್ಡ್ ಅಥವಾ ಫ್ರೀ ಈ ಎಲ್ಲಾ ಮಾಹಿತಿಗಳನ್ನು ನೀಡಲಿದೆ. ಸದ್ಯಕ್ಕೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಆ್ಯಪ್ ಕಾರ್ಯಾಚರಿಸಲಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರದ ಪ್ರಮುಖ ಭಾಷೆಗಳನ್ನು ಅಳವಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಈಗಾಗಲೇ ಆಂಧ್ರಪ್ರದೇಶದ ಗುಂಟೂರು, ವಿಶಾಖಪಟ್ಟಣಂ, ಕುರ್ನೂಲ್ ನಗರಗಳು, ಪಟ್ನಾದಲ್ಲಿ ಛತ್ತೀಸ್ಗಢ, ಹರಿಯಾಣದಲ್ಲಿ ಥನೆಸರ್ ಮತ್ತು ಸಿರ್ಸಾ, ತಮಿಳುನಾಡಿನಲ್ಲಿ ಸುಚಿಂದ್ರಂ ಮತ್ತು ಮೈಲಾಡಿ, ಮಹಾರಾಷ್ಟ್ರದಲ್ಲಿನ ಖೋಪೊಲ್, ಕೊಲ್ಹಾಪುರ, ನಂದುರಬರ್ ಪ್ರದೇಶಗಳು ಬಯಲುಶೌಚ ಮುಕ್ತಗೊಂಡಿವೆ. ಕೇರಳವೂ ಶೀಘ್ರದಲ್ಲಿ ಈ ಪಟ್ಟಿಯಲ್ಲಿ ಸೇರಲಿದೆ. ದೆಹಲಿಯ ಎನ್ಡಿಎಂಸಿ ಪ್ರದೇಶವು ದೆಹಲಿಯಲ್ಲಿ ಮೊತ್ತ ಮೊದಲು ಬಯಲುಶೌಚ ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ 2 ವರ್ಷಗಳಲ್ಲಿ ಸುಮಾರು 2.5 ಕೋಟಿ ಶೌಚಗೃಹಗಳನ್ನು ನಿರ್ಮಿಸಲಾಗುವುದು ಎಂದು ವೆಂಕಯ್ಯನಾಯ್ಡು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.