ಮುಂಡಗೋಡು : ಇಂದು ಬೌದ್ಧ ಆಧ್ಯಾತ್ಮಿಕ ಲೋಕದಲ್ಲಿ ಐತಿಹಾಸಿಕ ದಿನವಾಗಿದೆ. ಮಹಿಳಾ ಭಿಕ್ಷುಗಳ ತಂಡವೊಂದು ಬೌದ್ಧ ಧರ್ಮ ಗುರು ದಲಾಯಿ ಲಾಮಾರಿಂದ ಪ್ರತಿಷ್ಠಿತ ಗೆಷೇಮಾ ಪದವಿಯನ್ನು ಸ್ವೀಕರಿಸಲಿದ್ದಾರೆ.
ಇದುವರೆಗೆ ಮಹಿಳೆಯರಿಗೆ ಗೆಷೇಮಾ ಪದವಿ ಪಡೆಯುವ ಅವಕಾಶವಿರಲಿಲ್ಲ. ಆದರೆ ದಲಾಯಿ ಲಾಮಾ ಅವರು ಈ ಬಗ್ಗೆ ಬಹುಕಾಲದಿಂದ ಪ್ರತಿಪಾದಿಸುತ್ತಿದ್ದರು ಹಾಗು ಅವರೇ ಇಂದು ಆ ಪದವಿಯನ್ನು ಪ್ರದಾನ ಮಾಡುತ್ತಿರುವುದು ವಿಶೇಷ.
2 ದಶಕಗಳ ಕಠಿಣ ಅಧ್ಯಯನ, ಅಭ್ಯಾಸ ಮತ್ತು ಪರೀಕ್ಷೆಗಳ ಬಳಿಕ ಸುಮಾರು 30 ಮಹಿಳಾ ಭಿಕ್ಷುಗಳಿಗೆ ಇಂದು ಕರ್ನಾಟಕದ ಮುಂಡಗೋಡಿನ ಟಿಬೇಟಿಯನ್ ಪುನರ್ವಸತಿ ಕೇಂದ್ರದಲ್ಲಿ ಈ ಪ್ರತಿಷ್ಠಿತ ಪದವಿಯನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.